ಸುಳ್ಯ: ಸಿಡಿಪಿಒ ಕಛೇರಿ ನಿವೃತ್ತ ಚಾಲಕ ಯೋಗೀಶ್ ಗೌಡರಿಗೆ ಬೀಳ್ಕೊಡುಗೆ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ಮಂಗಳೂರಿನಲ್ಲಿ ವಾಹನ ಚಾಲಕರಾಗಿ ಕರ್ತವ್ಯಕ್ಕೆ ಹಾಜರಾಗಿ ಬಳಿಕ ಸುಳ್ಯ ಶಿಶು ಅಭಿವೃದ್ಧಿ ಇಲಾಖೆಗೆ ವರ್ಗಾವಣೆಗೊಂಡು ಸುಳ್ಯದಲ್ಲಿ ಸುಮಾರು 29 ವರ್ಷಗಳ ಕಾಲ ಸೇರಿದಂತೆ ಒಟ್ಟು 35 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿ ಮಾ‌. 31ರಂದು ನಿವೃತ್ತಿ ಹೊಂದಿದ ಯೇನೆಕಲ್ಲು ಗ್ರಾಮದ ಮಾಣಿಬೈಲು ಯೋಗೀಶ್ ಗೌಡರಿಗೆ ಇಲಾಖಾ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಮಾ. 31ರಂದು ಸುಳ್ಯ ಸಿಡಿಪಿಒ ಕಛೇರಿಯಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‌ಸಹಾಯಕ ನಿರ್ದೇಶಕಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ, ಸುಳ್ಯ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾ ಬಿ, ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ ಕೆ, ಶ್ರೀಮತಿ ಪಿ. ದೀಪಿಕಾ, ಶ್ರೀಮತಿ ಉಷಾ ಪ್ರಸಾದ್ ರೈ, ಶ್ರೀಮತಿ ವಿಜಯ ಜೆ.ಡಿ, ಪ್ರಥಮ ದರ್ಜೆ ಸಹಾಯಕರಾದ ಕು. ಪೂಜಾ ಪಿ.ಎ, ಕಛೇರಿ ಸಿಬ್ಬಂದಿಗಳಾದ ಅಚ್ಚುತ ಎ, ಶ್ರೀಮತಿ ಮಲ್ಲಿಕಾ ಕೆ.ಯು, ಶ್ರೀಮತಿ ಬಿಂದಿಯಾ ಕೆ, ಶ್ರೀಮತಿ ಕಾವ್ಯ ಎನ್.ಆರ್, ಕು. ಪ್ರಮೀಳಾ ಎಂ.ಆರ್, ಕು. ಶೋಭಿತಾ ಕೆ.ಸಿ. ಮತ್ತು ನಿವೃತ್ತ ಸಿಬ್ಬಂದಿ ಯೋಗೀಶರ ಪತ್ನಿ ಶ್ರೀಮತಿ ರೇಖಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.