ಕೇರ್ಪಳ ರಸ್ತೆಯಲ್ಲಿ ಪೋಲಾಗುತ್ತಿರುವ ನಗರ ಪಂಚಾಯತ್ ಕುಡಿಯುವ ನೀರು

0

ರಸ್ತೆಯ ಅಡಿಭಾಗದಿಂದ ಪೈಪ್ ಹೊಡೆದು ರಸ್ತೆಯಲ್ಲಿ ಹರಿದಾಡುತ್ತಿರುವ ನೀರು

ಸುಳ್ಯ ಕೇರ್ಪಳ ರಸ್ತೆ ಕೆವಿಜಿ ಪುರ ಭವನದ ಬಳಿ ನಗರ ಪಂಚಾಯತ್ ಕುಡಿಯುವ ನೀರಿನ ಪೈಪ್ ಹೊಡೆದು ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿದೆ.


ಈಗಾಗಲೇ ಸುಡು ಬಿಸಿಲಿನ ತಾಪಕ್ಕೆ ಕುಡಿಯುವ ನೀರಿಗೆ ಜನರು ಪರಿತಪಿಸುತಿದ್ದರೆ ಈ ರೀತಿ ನೀರು ಪೋಲಾಗುತ್ತಿರುವುದನ್ನು ತಪ್ಪಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.