ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಗೌರಿತಾ ಕೆ.ಜಿ. ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಸಾಧನೆ

0

ದೀರ್ಘ ಸಮಯ ವಜ್ರಾಸನ ದಲ್ಲಿ ಇರುವ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಗೌರಿತಾ ಕೆ. ಜಿ ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಸಾಧನೆ ಮೆರೆದು ದಾಖಲೆ ಸಾಧಿಸಿದ್ದಾರೆ. ವಜ್ರಾಸನ ದಲ್ಲಿ ನಿರಂತರ 44ನಿಮಿಷ 37 ಸೆಕೆಂಡುಗಳ ಕಾಲ ಇರುವ ಮೂಲಕ ವರ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ. ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಮೂರನೆಯ ತರಗತಿ ವಿದ್ಯಾರ್ಥಿನಿ. ಸಂಪಾಜೆ ಕಳಗಿ ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ಅವರ ಪುತ್ರಿ.