ಮೇ.2 – ಮೇ. 3 ಶ್ರೀ ಶಿರಾಡಿ ದೈವಸ್ಥಾನ ಬೆಟ್ಟುಮಕ್ಕಿ ಬಾಳುಗೋಡು ಇದರ ವಾರ್ಷಿಕ ನೇಮೋತ್ಸವ

0

ಶ್ರೀ ಶಿರಾಡಿ ದೈವಸ್ಥಾನ ಬೆಟ್ಟುಮಕ್ಕಿ ಬಾಳುಗೋಡು ಇದರ ವಾರ್ಷಿಕ ನೇಮೋತ್ಸವ ಮೇ.2 – ಮೇ.3 ರಂದು ನಡೆಯಲಿದೆ.

ಮೇ. 2 ರಂದು ಗ್ರಾಮಸ್ಥರು ಬೆಟ್ಟುಮಕ್ಕಿಯಲ್ಲಿ ಸೇರಿ ಭಂಡಾರ ಹಿಡಿದು ಶಿರಾಡಿ ಬದಿ ಕಾಂಚಾರಕ್ಕೆ ಹೋಗಿ ತಂಬಿಲಾಧಿ ಸೇವೆ ನಡೆಯಲಿದೆ. ಬಳಿಕ ಸಂಜೆ ಗೊಂಬೆ ಕುಣಿತ, ವಾದ್ಯ ಘೋಷದೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಭಂಡಾರ ಬೆಟ್ಟುಮಕ್ಕಿಗೆ ಬರಲಿದೆ. ಬಳಿಕ ಸಂಜೆ 7.00 ಕ್ಕೆ ಊರ ಪರವೂರ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ನಡೆದು, ರಾತ್ರಿ ಗಂಟೆ 9 ಕ್ಕೆ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ “ಯಾನ್ ಉಲ್ಲೆತ್ತಾ” ಎಂಬ ತುಳು ನಾಟಕ ನಡೆಯಲಿದೆ. ಮೇ.3 ರ ಬೆಳಗ್ಗೆ
ಶ್ರೀ ಶ್ರೀರಾಡಿ ದೈವದ ಹಾಗೂ ಸಹ ಪರಿವಾರ ದೈವಗಳಾದ ಬ್ರಹ್ಮರು, ನುಗ್ಗೆ ಮಾದಿಮಾಳ್, ಮಣಿಗೋವಿಂದ, ಗಿಳಿರಾಮ, ಪೊಟ್ಟ, ಮೊರಾಂದಾಯ, ಪುರುಷ, ಕರಿನಾಯಕ, ಬೇಡವ, ಬಚ್ಚನಾಯಕ, ಮಣಿಪಂತ ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ,
ಅಡಿಮಂತಾಯ ಹಾಗೂ ಗುಳಿಗ ದೈವಗಳ ವಾರ್ಷಿಕ ನೋಮೋತ್ಸವವು
ಜರುಗಲಿರುವುದು.