ಗ್ರಾಮ ಪಂಚಾಯತ್ ಸ್ವಚ್ಛತೆ, ನೈರ್ಮಲ್ಯಕಾಗಿ ಆಯ್ದ ಭಾಗಗಳಲ್ಲಿ ಸಿ. ಸಿ. ಟಿವಿ ಅಳವಡಿಕೆ ಸದ್ಯಸರ ಒತ್ತಾಯ
ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ದ 19.ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಗಿ ಪಂಚಾಯತ್ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ ಸಿ. ಸಿ. ಟಿವಿ ಅಳವಡಿಕೆ ಸದಸ್ಯರ ಒತ್ತಾಯ ಮೇರೆಗೆ ಅಳವಡಿಸಲು ಕ್ರಮ ಕೈಗೊಳ್ಳಲು ಸರ್ವಾಮತದಿಂದ ನಿರ್ಣಯಿಸಲಾಯಿತು. ಮತ್ತು ಮುಖ್ಯವಾಗಿ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ರಸ್ತೆಗಳಿಗೆ ಶಾಶ್ವತ ನಾಮಫಲಕಳವಡಿಕೆ ಕ್ರಮ ವಹಿಸುವುದು,ಅರಂತೋಡು ಪೇಟೆಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸ್ಥಾಪನೆಗೆ ಆದ್ಯತೆ, ಶೀಘ್ರವಾಗಿ ಬೀದಿ ದೀಪಗಳ ದುರಸ್ತಿ ಗೆ ಕ್ರಮ, ಮತ್ತು ಪಂಚಾಯತ್ ರಸ್ತೆಗಳ ಬದಿ ರಸ್ತೆಯ ಫಲಾನುಭವಿಗಳ ಸಹಯೋಗದೊಂದಿಗೆ ಕಾಡು ಕಡಿಯಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ರಾದ ಭವಾನಿ ಚಿಟ್ಟನೂರು, ಸದಸ್ಯರುಗಳಾದ ವೆಂಕಟರಮಣ ಪೆತ್ತಾಜೆ, ರವೀಂದ್ರ ಪಂಜಿಕೋಡಿ, ಗಂಗಾಧರ ಗುಂಡ್ಲ ಬನ, ಪುಷ್ಪರಾಜ್ ಕೊಡಂಕೇರಿ, ಶಶಿಧರ ದೊಡ್ಡ ಕುಮೆರಿ, ಕು l ಶ್ವೇತಾ ಅರಮನೆ ಗಾಯ, ಮಾಲಿನಿ ವಿನೋದ್ ಉಳುವಾರು, ಹರಿಣಿ ದೇರಾಜೆ, ವಿನೋದ ತೊಡಿಕಾನ, ಸರಸ್ವತಿ ಬಿಳಿಯಾರು, ಸುಜಯ ಲೋಹಿತ್ ಎಂ. ಎ. ಉಪಸ್ಥಿತರಿದ್ದರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್. ಆರ್. ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು.