ಆಲೆಟ್ಟಿ: ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧಿಸಿ ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸಭೆ

0

ಕಸ್ತೂರಿ ರಂಗನ್ ವರದಿ ಜಾರಿ ಮಾಡದಂತೆ ವಿರೋಧಿಸಿ ಅಲೆಟ್ಟಿ ಪಂಚಾಯತ್ ನಲ್ಲಿ
ಡಿ.19 ರಂದು ಸಭೆ ನಡೆಸಲಾಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ ಅದ್ಯಕ್ಷತೆ ವಹಿಸಿದ್ದರು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮುಖ್ಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ “ಪಶ್ಚಿಮ ಘಟ್ಟ ಹಾಗೂ ಜನ ವಸತಿ ಪ್ರದೇಶಗಳಿಗೆ ಗಡಿ ಗುರುತು ಮಾಡಿ ಜಂಟಿ ಸರ್ವೆ ಮಾಡಬೇಕು. ರೈತರಿಗೆ ಸಾಗುವಳಿ
ಚೀಟಿ ನೀಡಿರುವ ಜಮೀನುಗಳನ್ನು ಪ್ಲಾಟಿಂಗ್ ಮಾಡಬೇಕು. ರೈತರ ಬೆಳೆ ರಕ್ಷಣೆಗೆ ಹಾಗೂ ಆತ್ಮ ರಕ್ಷಣೆಗೆ ಕೋವಿಗೆ ಪರವಾನಿಗೆ ಕೊಡಿಸುವ ವ್ಯವಸ್ಥೆ ಆಗಬೇಕೆಂದು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ
ಕಡಬ ಮಲೆನಾಡು ಹಿತ ರಕ್ಷಣಾ ವೇದಿಕೆಯ ಸಂಚಾಲಕ ಸಯ್ಯದ್ ಮೀರಾ ಸಾಹೇಬ್,
ರೈತ ಹೋರಾಟಗಾರ ಚಂದ್ರಶೇಖರಬಾಳುಗೋಡು, ಪಂಚಾಯತ್ ಸದಸ್ಯರುಗಳಾದ
ಶ್ರೀಮತಿ ಗೀತಾ ಕೊಲ್ಚಾರು,
ಶ್ರೀಮತಿ ವೇದಾವತಿ ನೆಡ್ಚಿಲು,ಮುತ್ತಪ್ಪ ಪೂಜಾರಿ ಮೊರಂಗಲ್ಲು, ಧರ್ಮಪಾಲ ಕೊಯಿಂಗಾಜೆ, ಅಲೆಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿರ್ದೇಶಕಎನ್.ಎ. ಗಂಗಾಧರ ನೆಡ್ಚಿಲು, ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮದ ಕೃಷಿಕರು ಸಭೆಯಲ್ಲಿ ಭಾಗವಹಿಸಿದರು.