ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಐದು ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸಾಲಗಾರ ಸಾಮಾನ್ಯ ಕ್ಷೇತ್ರದ ಐದು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಂತೋಷ್ ಕುತ್ತಮೊಟ್ಟೆ ಅವರು 681 ಮತ ಹಾಗೂ ದಯಾನಂದ ಕುರುಂಜಿ 637 ಚಂದ್ರಶೇಖರ ಚೋಡಿಪಣೆ 633, ಶಿವಾನಂದ ಕುಕ್ಕುಂಬಳ 599 ಉದಯಕುಮಾರ್ ಉಳುವಾರು 564 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಜನಾರ್ದನ ಅಡ್ಕಬಳೆ 229 ಅಶ್ರಫ್ ಗುಂಡಿ 154, ತೇಜನಾಥ ಬನ 126 ಸಂತೋಷ್ ಕಿರ್ಲಾಯ 209, ಮಹಮ್ಮದ್ ಅಮೀರ್ 102 ಮತ ಪಡೆದು ಸೋಲನುಭವಿಸಿದ್ದಾರೆ.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯವಾಗಿ ಸ್ಪರ್ಧಿಸಿದ್ದ ತಾಜುದ್ಧೀನ್ ಅರಂತೋಡು 34 ಮತ ಪಡೆದು ಸೋಲನುಭವಿಸಿದ್ದಾರೆ.