ತುಳು ನಾಡಿನಲ್ಲಿ ನೈಜ ಸಂಸ್ಕೃತಿ , ಸಂಸ್ಕಾರ ಉಳಿದಿದೆ: ಪ್ರಕಾಶ್ ಅಗಸಮನಿ
ಶ್ರೀ ಉಳ್ಳಾಕುಲು ಕಲಾರಂಗ(ರಿ) ಪಲ್ಲೋಡಿ ಪಂಜ ಇದರ ವತಿಯಿಂದ ಪಲ್ಲೋಡಿ ಕೆಸರ್‌ದ ಪರ್ಬ-2024 ಡಿ.29 ರಂದು ಪಲ್ಲೋಡಿ ಗದ್ದೆಯಲ್ಲಿ ನಡೆಯಿತು.
ಪಂಜ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಮನಿ ಉದ್ಘಾಟಿಸಿ ಮಾತನಾಡಿ ” ನಮ್ಮ ಸಂಪ್ರದಾಯಗಳು ಉಳಿಯಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ಈ ಮೂಲಕ ದೈಹಿಕ ಮಾನಸಿಕ ಆರೋಗ್ಯ ದೊರೆಯುತ್ತದೆ. ಜೊತೆಗೆ ನಾವೆಲ್ಲರೂ ಒಂದೇ ಎಂಬ ಸಂಘಟನೆ ಬೆಳೆಯುತ್ತದೆ.ತುಳು ನಾಡಿನಲ್ಲಿ ನೈಜ ಸಂಸ್ಕೃತಿ ಸಂಸ್ಕಾರ ಉಳಿದಿದೆ”ಎಂದು ಹೇಳಿದರು. ಶ್ರೀ ಉಳ್ಳಾಕುಲು ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಸ್ಥಳ ದಾನಿ ಅಲ್ಪೋನ್ಸ್ ಕರ್ನೋಲಿಯೋ ಹಾಗೂ ಕಲಾ ರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಸತೀಶ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ನಮಿತಾ ಪಲ್ಲೋಡಿ ಪ್ರಾರ್ಥಿಸಿದರು. ಲಿಖಿತ್ ಪಲ್ಲೋಡಿ ಸ್ವಾಗತಿಸಿದರು. ಪ್ರಕಾಶ್ ಜಾಕೆ ಮತ್ತು ಶ್ರೀಮತಿ ನಿವೇದಿತಾ ಪಲ್ಲೋಡಿ ನಿರೂಪಿಸಿದರು. ಸತೀಶ್ ಪಲ್ಲೋಡಿ ವಂದಿಸಿದರು.