ಬೀಡಾಡಿ ಹೋರಿಗಳ ನಿಯಂತ್ರಣಕ್ಕೆ ಸ್ಥಳಿಯರ ಆಗ್ರಹ
ಹರಿಹರ ಪಲ್ಲತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ಎಂಬವರ ಮೇಲೆ ಬೀಡಾಡಿ ಹೋರಿಯೊಂದು ಎರಗಿ ಅವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಸಂಜೆ ಅವರು ಮನೆಯ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ರಸ್ತೆ ಬದಿಯಿದ್ದ ಹೋರಿ ಏಕಾಏಕಿ ಅವರ ಮೇಲೆ ಎರಗಿ ಬಂದು ದಾಳಿ ನಡೆಸಿದೆ.
ಘಟನೆಯಲ್ಲಿ ತಲೆ,ಸೊಂಟ, ಪಕ್ಕೆಲುಬಿಗೆ ಗಾಯಗಳಾಗಿದ್ದು ಅವರನ್ನು ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಿದ್ದಾರೆ.
ಪಲ್ಲತ್ತಡ್ಕ ಪರಿಸರದಲ್ಲಿ ಬೀಡಾಡಿ ದನ, ಹೋರಿಗಳನ್ನು ತಂದು ಬಿಡಲಾಗುತಿದ್ದು, ಇತ್ತೀಚೆಗೆ ಮಹಿಳೆ ಸಹಿತ ಇತರರ ಮೇಲೆ ಧಾಳಿಗೆ ಮುಂದಾದ ಘಟನೆ ನಡೆದಿರುವ ಬಗ್ಗೆ ಸ್ಥಳಿಯರು ಹೇಳಿದ್ದಾರೆ. ಶಾಲಾ ಮಕ್ಕಳು, ನಾಗರಿಕರು ಈ ರಸ್ತೆ ಮಾರ್ಗವಾಗಿ ತೆರಳುತಿದ್ದು ಬೀಡಾಡಿ ಹೋರಿಗಳು ಈ ಸಂದರ್ಭ ಧಾಳಿ ನಡೆಸುವ ಸಂಭವವಿದೆ. ಹೀಗಾಗಿ ಸ್ಥಳಿಯಾಡಳಿತ ಬೀಡಾಡಿ ಜಾನುವಾರುಗಳ ವಿರುದ್ಧ ಕ್ರಮ ಜರಗಿಸಿ, ಸಾರ್ವಜನಿಕರ ಜೀವ ರಕ್ಷಣೆಗೆ ಮುಂದಾಗುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.