ಎಸ್.ಬಿ.ಲ್ಯಾಬ್‌ನ ಬಾಲಕೃಷ್ಣ ನಾಯರ್ ಗೆ ಪಿತೃ ವಿಯೋಗ

0

ಸುಳ್ಯ ಎಸ್.ಬಿ.ಲ್ಯಾಬೋರೇಟರಿಯ ಮಾಲಕ ಬಾಲಕೃಷ್ಣನ್ ನಾಯರ್‌ರವರ ತಂದೆ ತೆಕ್ಕಿಲ್ ಮೇಲತ್ ಪ್ರಭಾಕರನ್ ನಾಯರ್ ಅಲ್ಪಕಾಲದ ಅಸೌಖ್ಯದ ಬಳಿಕ ಇಂದು ಬಂದಡ್ಕದ ಮನೆಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.


ಮೂಲತಃ ಸುಳ್ಯದ ಮೂಡೆಕಲ್ಲಿನವರಾದ ಅವರು ಪ್ರಸ್ತುತ ಬಂದಡ್ಕ ಬಳಿ ವಾಸವಿದ್ದರು. ಪತ್ನಿ ಕಮಲಾಕ್ಷಿ ಅಮ್ಮ, ಪುತ್ರರಾದ ದಿ.ಶ್ರೀಧರನ್ ನಾಯರ್, ಸುಧಾಕರನ್ ನಾಯರ್, ಬಾಲಕೃಷ್ಣನ್ ನಾಯರ್, ಪುತ್ರಿಯರಾದ ಸರೋಜಿನಿ, ರಮಣಿ, ನಳಿನಾಕ್ಷಿ, ಬಂಧುಮಿತ್ರರನ್ನು ಅವರು ಅಗಲಿದ್ದಾರೆ.