ಮುರೂರು – ದೇವರಗುಂಡ ಶ್ರೀಕೃಷ್ಣ ಭಜನಾ ಮಂದಿರ ಪುನಃ ಪ್ರತಿಷ್ಠಾ ಮಹೋತ್ಸವ

0

ಸಮಾಜದಲ್ಲಿ ಪ್ರೀತಿ ವಿಶ್ವಾಸ, ಸಂಸ್ಕಾರ ಸಂಸ್ಕೃತಿಯನ್ನು ನೀಡುವ ಆರಾಧನಾ ಕೇಂದ್ರ ಭಜನಾ ಮಂದಿರಗಳು. ಮುರೂರಿನಲ್ಲಿ ಪುನಃ ನಿರ್ಮಾಣಗೊಂಡ ಭಜನಾ ಮಂದಿರದಿಂದ ಎಲ್ಲರಿಗೂ ಶ್ರೆಯಸ್ಸು ಸಿಗಲಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಹೇಳಿದ್ದಾರೆ.
ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡ ದ್ವಾರಕಾನಗರದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀಕೃಷ್ಣ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಾಮಾಜಿಕ ಮುಖಂಡರಾದ ಪ್ರಕಾಶ್ ಮಲ್ಪೆ ಧಾರ್ಮಿಕ ಉಪನ್ಯಾಸ ನೀಡಿದರು. ಅಜ್ಞಾನ ಮತ್ತು ಆಲಸ್ಯ ಇರುವವರು ಜೀವನದಲ್ಲಿ ಮೇಲೆ ಹೋಗಲು ಸಾಧ್ಯವಿಲ್ಲ. ಅಂತವರು ಶ್ರೀಕೃಷ್ಣ ನ ಧ್ಯಾನ ಮಾಡಿದರೆ ಅವರಿಗೆ ಒಳಿತಾಗುತ್ತದೆ ಎಂದು ಅವರು ಹೇಳಿದರು.
ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಡಿ.ವಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು.


ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ಪಿಎಲ್ ಡಿ ಮಾಜಿ ಅಧ್ಯಕ್ಷ ಪ್ರಭಾಕರ ನಾಯಕ್, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ನವೀನ್ ಮುರೂರು, ಪ್ರಶಾಂತಿ, ರಾಧಿಕ ಮೈತಡ್ಕ, ಮಂಡೆಕೋಲು ಸಹಕಾರ ಸಂಘದ ಉಪಾಧ್ಯಕ್ಷೆ ಜಲಜಾ ದೇವರಗುಂಡ
ಆಡಳಿತ ಸಮಿತಿ ಕಾರ್ಯದರ್ಶಿ ಸುದರ್ಶನ್ ಮುರೂರು, ಕೋಶಾಧಿಕಾರಿ ಪ್ರದೀಪ ಮುರೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಕಮಲಾಕ್ಷ ವಾಗ್ಲೆ ಕಾಪಿನಡ್ಕ, ಕೋಶಾಧಿಕಾರಿ ನವೀನ ಡಿ.ಎಸ್., ಪ್ರತಿಷ್ಠಾ ಸಮಿತಿ ಕಾರ್ಯದರ್ಶಿ ಮುಕುಂದ ಗೌಡ ದೇವರಗುಂಡ ಮೊದಲಾದವರಿದ್ದರು.


ಪ್ರತಿಷ್ಠಾ ಸಮಿತಿ ಗೌರವಾಧ್ಯಕ್ಷ ಪುತ್ತು ಮಾಸ್ತರ್ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಸಮಿತಿ ಅಧ್ಯಕ್ಷ ಚಂದ್ರಜಿತ್ ಮಾವಂಜಿ ಸ್ವಾಗತಿಸಿದರು. ಧನ್ಯ ಪ್ರದೀಪ್ ವಂದಿಸಿದರು. ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.