ದೊಡ್ಡತೋಟ – ಮರ್ಕಂಜ ರಸ್ತೆಯ ಹೈದoಗೂರುವಿನ ಬಂಡಿತಡ್ಕ ಎಂಬಲ್ಲಿ ತಿರುವಿನಲ್ಲಿ ಮರ್ಕoಜ ಕಡೆಗೆ ಹೋಗುವ ಓಮಿನಿ ಕಾರು ಮತ್ತು ದೊಡ್ಡತೋಟ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಹೊಡೆದ ಘಟನೆ ಇದೀಗ ವರದಿಯಾಗಿದೆ.

ಪರಿಣಾಮ ಬೈಕ್ ಸವಾರ ತೀರ್ವ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಧನಂಜಯ ಬುಡಲೆ ಎಂಬವರು ಗಾಯಗೊಂಡವರು.
ಓಮಿನಿಯವರು ಬೆಳ್ಳಾರೆ ಕಡೆಯಿಂದ ಮರ್ಕoಜ ಕಡೆಗೆ ವಯರಿಂಗ್ ಕೆಲಸಕ್ಕೆ ಹೋಗುವರು ಎಂದು ತಿಳಿದು ಬಂದಿದೆ.
ಇದೆ ತಿರುವಿನಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು, ಮುನ್ನೆಚ್ಚರಿಕ ಕ್ರಮ ಅಳವಡಿ ಸುವಂತೆ ಊರವರು ಒತ್ತಾಯಿಸಿದ್ದಾರೆ.