ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರುರವರಿಗೆ ಪುತ್ತೂರು ಆದರ್ಶ ಸೊಸೈಟಿ ವತಿಯಿಂದ ಸನ್ಮಾನ

0

ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ನಿ. ದರ್ಬೆ ಪುತ್ತೂರು ಇದರ ಅಧ್ಯಕ್ಷರಾದ ‘ಸಹಕಾರ ರತ್ನ’ ಕೆ.ಸೀತಾರಾಮ ರೈ ಸವಣೂರು ಮತ್ತು ನಿರ್ದೇಶಕರಾರ ಚಿಕ್ಕಪ್ಪ ನಾಕ್ ಅರಿಯಡ್ಕ ಇವರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ.ಲಿ ಮಂಗಳೂರು ಇದರ ನಿರ್ದೇಶಕರಾಗಿ ಹಾಗೂ ಸಂಘದ ನಿರ್ದೇಶಕರಾದ ಸೀತಾರಾಮ ಬಿ. ಶೆಟ್ಟಿ ಮಂಗಳೂರು ಇವರು ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ.ಲಿ ಬೆಳ್ತಂಗಡಿ ಇದರ ನಿರ್ದೇಶಕರಾಗಿ ಮರು ನೇಮಕಗೊಂಡ ಸಲುವಾಗಿ ಫೆ. 3 ರಂದು ನಡೆದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ನಿ. ದರ್ಬೆ ಪುತ್ತೂರು ಇದರ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ದೇಶಕರುಗಳ ಪರವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸುಂದರ ರೈ ಸವಣೂರು, ನಿರ್ದೇಶಕರುಗಳಾದ ಬಿ ಮಹಾಬಲ ರೈ, ಬೋಳಂತೂರು, ಎಸ್.ಎಂ.ಬಾಪು ಸಾಹೇಬ್ ಸುಳ್ಯ, ಎನ್. ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನ್ ಎಲ್ ಶೆಟ್ಟಿ, ಸವಣೂರು, ವಿ.ವಿ.ನಾರಾಯಣ ಭಟ್ ನರಿಮೊಗರು, ಎನ್.ರಾಮಯ್ಯ ರೈ ತಿಂಗಳಾಡಿ, ಜೈರಾಜ್ ಭಂಡಾರಿ ನೋಣಾಲು, ಮಹಾದೇವ ಎಂ. ಮಂಗಳೂರು, ಶ್ರೀಮತಿ ಪೂರ್ಣಿಮಾ ಎಸ್. ಆಳ್ವ ಮಂಗಳೂರು, ಶ್ರೀಮತಿ ಯಮುನಾ ಎಸ್ ರೈ ಗುತ್ತುಪಾಲ್, ಮಹಾಪ್ರಬಂಧಕರಾದ ವಸಂತ ಜಾಲಾಡಿ, ಸಹಾಯಕ ಮಹಾಪ್ರಬಂಧಕಾದ ಸುನಾದ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.