ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು “ಅಖಿಲ ಭಾರತ ಕಲೆ ಮತ್ತು ಪ್ರದರ್ಶನ” ಸ್ಪರ್ಧೆ ರಂಗ್ -2024ರಲ್ಲಿ ಭಾಗವಹಿಸಿದ್ದು ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿಯ ಹಂಸಿನಿ .ಹೆಚ್. ಎಸ್ ಚಿನ್ನದ ಪದಕವನ್ನು ಪಡೆದಿದ್ದು, ಐದನೇ ತರಗತಿಯ ಸಂಚಿತಾ ಬೆಳ್ಳಿಯ ಪದಕ ಮತ್ತು 9ನೇ ತರಗತಿ ತ್ರಿಷಾ ಖದೀಜಾ, ಎಂಟನೇ ತರಗತಿ ಅನುಶ್ರೀ ಎ ಎನ್ ಮತ್ತು 6ನೇ ತರಗತಿ ಸೃಷ್ಠಿ ಯು ಎಲ್ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅದೇ ರೀತಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಾಲ್ಕನೇ ತರಗತಿಯ ನಿಹಾಲ್ ಕೆ. ಎ. ಚಿನ್ನದ ಪದಕವನ್ನು ಎರಡನೇ ತರಗತಿ ಹಲೀಮಾ ಹಾನಿಯಾ , 5ನೇ ತರಗತಿ ಸಾಹಿತ್ಯ ಎನ್ ವೈ ಬೆಳ್ಳಿಯ ಪದಕಗಳನ್ನು ಹಾಗೂ ಎರಡನೇ ತರಗತಿಯ ರಿಯಾ ಕೆ ವಿ, 5ನೇ ತರಗತಿಯ ಲಿಶ್ವಿ ಡಿ ಬಿ, 5ನೇ ತರಗತಿಯ ಲಾಸ್ಯ ಎಂ.ಎಸ್, 8ನೇ ತರಗತಿಯ ಧನ್ಯ ಶ್ರೀ ಪಿ. ಎಸ್ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಭಾಷಣ ಸ್ಪರ್ಧೆಯಲ್ಲಿ ಐದನೇ ತರಗತಿಯ ಉನ್ನತಿ ಕೆ ಸಿ ಚಿನ್ನದ ಪದಕ ನಾಲ್ಕನೇ ತರಗತಿಯ ಅತುಲ್ಯ ದಿಯಾ ಹಾಗೂ ಚಂದನ್ ಆರ್ ಬೆಳ್ಳಿ ಪದಕಗಳನ್ನು ಮತ್ತು ಎಂಟನೇ ತರಗತಿಯ ಅನುಶ್ರೀ ಎ. ಎನ್, ಮೂರನೇ ತರಗತಿಯ ವಿದ್ಯಾರ್ಥಿಗಳಾದ ನೇಹಾ ಬಿ ಜಿ, ವಿದ್ವಾನ್ ಆರ್ ದಾಸ್ ಕಂಚಿನ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಭಾಗವಹಿಸಿದ ಮತ್ತು ವಿಜೇತ ಮಕ್ಕಳಿಗೆ ಅತಿಥಿಯಾಗಿ ಆಗಮಿಸಿದ ಡಾ. ಲೇಖ ಬಿ ಎಂ ಸಂಸ್ಥೆಯ ಅಧ್ಯಕ್ಷರಾದ ರುಕ್ಮಯದಾಸ್, ಪ್ರಧಾನ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್ , ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಮತ್ತು ಪೋಷಕ ಸಮಿತಿಯ ಸದಸ್ಯರು ಪದಕಗಳನ್ನು ನೀಡಿ ಅಭಿನಂದಿಸಿದರು.
