ಪೇರಡ್ಕ ಉರೂಸ್ ಸಮಾರೋಪ

0

ನಾವು ಮಾಡುವ ಕೆಲಸ ಅಥವಾ ಸೇವೆಯಲ್ಲಿ ವಂಚನೆ ಮೋಸ ಇರಬಾರದು. ಪ್ರಾಮಾಣಿಕವಾಗಿರಬೇಕು, ಯಜಮಾನನಿಗೆ ಯಾವತ್ತು ಮೋಸ ಮಾಡಬಾರದು ಅವರಿಗೆ ತೃಪ್ತಿಯಾಗುವಂತಾ ಸೇವೆ ಮತ್ತು ಕಾಯಕವಾಗಿರಬೇಕೆಂದು ಬಹು| ಸಯ್ಯದ್ ಝೈನುಲ್ ಆಬಿದೀನ್ ತಂಘಳ್ ದುಗ್ಗಲಡ್ಕ ಹೇಳಿದರು.

ಅವರು ಫೆ.2 ರಂದು ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಇದರ ಉರೂಸ್ ಸಮಾರೋಪ ಸಮಾರಂಭದಲ್ಲಿ ದುವಾಶೀರ್ವಾಚನ ಮಾಡಿದರು. ಅಧ್ಯಕ್ಷತೆಯನ್ನು ಮುಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಸ್ಥಳೀಯ ಖತೀಬರಾದ ಬಹು। ನಈಮ್ ಫೈಝಿ ಅಲ್ ಮುಅಬರಿ ಪ್ರಸ್ತಾವನೆ ಗೈದರು. ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಖ್ಯಾತ ವಾಗ್ಮಿ ಬಹು। ಶಮೀರ್ ದಾರಿಮಿ ಕೊಲ್ಲಂ ಮಾತನಾಡಿ ತಾಯಿಯವರು ಉಣಬಡಿಸುವ ಆಹಾರದಲ್ಲಿ ತಂದೆಯವರ ಬೆವರು ಇದೆ ಎಂಬುದು ಮರೆಯಬಾರದು ಅಂತಹ ತಂದೆಯವರನ್ನು ನಾವು ಮಾತನಾಡಿಸುವುದಿಲ್ಲ ಮರೆಯುತ್ತಿರುವುದು ಖೇದಕರ ಎಂದರು.


ಎ.ಆರ್. ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಮಹಮ್ಮದ್ ಕುಂಇ ಸಂಖೇಶ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಹಮೀದ್ ಮುಸ್ಲಿಯಾರ್, ಹಾರೀಸ್ ಅಝ್ಹರಿ ಗಟ್ಟಮನೆ, ನೌಶಾದ್ ಅಝ್ಹರಿ, ಕಾರ್ಯದರ್ಶಿ ಪಿ.ಕೆ ಉಮ್ಮರ್, ಉಪಾಧ್ಯಕ್ಷ ಟಿ.ಬಿ ಹನೀಫ್ ಕೋಶಾಧಿಕಾರಿ ಮಹಮ್ಮದ್ ಕುಂಇ’ತೆಕ್ಕಿಲ್ ಪೇರಡ್ಕ, ಗೌರವಾಧ್ಯಕ್ಷ ಆರಿಫ್ ಟಿ.ಎ ತೆಕ್ಕಿಲ್, ಕೆ.ಎಂ ಇಸ್ಮಾಯಿಲ್ ಮೊದಲಾದವರಿದ್ದರು.

ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಅನ್ನದಾನ ನಡೆಯಿತು. ಉರೂಸ್ ಕಾರ್ಯಕ್ರಮದ ಪ್ರತೀ ದಿನ ಬಂದ ಭಕ್ತಾದಿಗಳಿಗೆ ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.