ದುಗ್ಗಲಡ್ಕ: ಶ್ರೀ ದುಗ್ಗಲಾಯ ನೇಮೋತ್ಸವದ ಆಮಂತ್ರಣ ಬಿಡುಗಡೆ

0

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಢಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾರ್ಚ್ 19 ಮತ್ತು 20ರಂದು ನಡೆಯಲಿದ್ದು, ಆಮಂತ್ರಣ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಕಾರ್ಯದರ್ಶಿ ಶೇಖರ ಕುದ್ಪಾಜೆ, ಮಹಿಳಾ ಸೇವಾ ಸಂಘದ ಅಧ್ಯಕ್ಷರಾದ ಪ್ರಭಾವತಿ ರೈ ಪ್ರಮುಖರಾದ ದಿನೇಶ್ ಡಿ.ಕೆ.,ಚಂದ್ರಶೇಖರ ಗೌಡ ಮೋಂಟಡ್ಕ, ಜಯರಾಮ ಗೌಡ ಪಾನತ್ತಿಲ,ಶಿವರಾಮ ಪಾನತ್ತಿಲ, ನಾರಾಯಣ ಮಣಿಯಾಣಿ ದುಗ್ಗಲಡ್ಕ,ಚಂದ್ರಶೇಖರ ಆಚಾರ್ಯ ನೀರಬಿದಿರೆ, ನಾರಾಯಣ ಮಣಿಯಾಣಿ ನೀರಬಿದಿರೆ, ಸೀತಾರಾಮ ಈಶ್ವರಡ್ಕ ಬಾಲಕೃಷ್ಣ ಗೌಡ ದುಗ್ಗಲಡ್ಕ ಮೊದಲಾದವರು ಉಪಸ್ಥಿತರಿದ್ದರು.