ಸುಳ್ಯ : ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ

0

ಸುಳ್ಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ‘ಜ್ಯುವೆಲ್ಸ್ ಗ್ರೂಪ್’ ನೇತ್ರತ್ವದಲ್ಲಿ ಇಂಡಿಯನ್ ಕ್ಯಾನ್ಸ‌ರ್ ಸೊಸೈಟಿ ಮತ್ತು ಕಣಚೂರು ಆಸ್ಪತ್ರೆ, ಪ್ರಣವ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿಷನ್‌ ಚಾರಿಟೇಬಲ್ ಟ್ರಸ್ಟ್, ಕಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ ಇವರ ಸಹಕಾರದೊಂದಿಗೆ ಉಚಿತ ಕ್ಯಾನ್ಸ‌ರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರ ಸುಳ್ಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಫೆ. 9ರಂದು ನಡೆಯಿತು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ನ ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್, ವಿಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷಡಾ| ರಂಗಯ್ಯ ಎಸ್, ಕೆಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ ಅಧ್ಯಕ್ಷ ರೊನಾಲ್ಡ್ ಎಸ್. ಗೋಮ್ಸ್, ಪ್ರಣವ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ, ಕಣಚೂರು ಮೆಡಿಕಲ್ ಕಾಲೇಜಿನ ಕ್ಯಾನ್ಸರ್ ತಜ್ಞ ಡಾ| ನಝೀಬ್ ಬಿ. ಮೊಹಮ್ಮದ್, ಸಮಾಜ ಸೇವಕ ಫೆಡ್ರಿಕ್ ಡಿ’ಸೋಜ, ಲಯನ್ ಪ್ರಾಂತಿಯ ಅಧ್ಯಕ್ಷ ಗಂಗಾಧರ ರೈ, ವಲಯಧ್ಯಕ್ಷೆ ರೂಪಶ್ರೀ ಜೆ. ರೈ, ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಸಂಯೋಜಕ ಪಿ.ಎಂ. ರಂಗನಾಥ್ ಪ್ರಾಸ್ತಾವಿಕ ಮಾತನಾಡಿದರು. ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಮಚಂದ್ರ ಪಳ್ಳತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ರಮೇಶ್ ಶೆಟ್ಟಿ ವಂದಿಸಿದರು.