ಶ್ರೀ ಸಾಯಿ ಚಾರಿಟೇಬಲ್ ಅನಾಥಶ್ರಮಕ್ಕೆ ಸಜ್ಜನ ತಂಡ ಭೇಟಿ-ಕೊಡುಗೆ

0

ಕಳೆದ 20 ವರ್ಷಗಳಿಂದ ಅನಾಥಾಶ್ರಮಕ್ಕೆ ದೇಣಿಗೆಯನ್ನು ನೀಡುತ್ತಾ ಬಂದಿರುವ ಸಜ್ಜನ ಪ್ರತಿಷ್ಠಾನ ತಂಡ ಫೆ. 7 ರಂದು ಬೆಂಗಳೂರಿನ ಕೆಆರ್ ಪುರಂ ಬಳಿ ಇರುವ ಶ್ರೀ ಸಾಯಿ ಚಾರಿಟೇಬಲ್ ಟ್ರಸ್ಟ್ ಅನಾಥಾಶ್ರಮಕ್ಕೆ ಭೇಟಿ ನೀಡಿದರು.

ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಅಡ್ವಕೇಟ್ ಮಂಜುನಾಥ, ಸಹ ಸಂಚಾಲಕರಾದ ವಾಸು ಎಂ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸ್ಥಾಪಕಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಯವರು ಭೇಟಿ ನೀಡಿ ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಂಚಿ ವಯೋ ವೃದ್ಧರಿಗೆ ಡೈಪರ್, ಹಳೆ ಬಟ್ಟೆ ನೀಡುವುದಲ್ಲದೆ, ಇನೋವಿ ಮೊಬಿಲಿಟಿ ಕಂಪನಿಯ ಸಹಕಾರದೊಂದಿಗೆ ಸರಿಸುಮಾರು ಒಂದುವರೆ ಲಕ್ಷ ಬೆಲೆಬಾಳುವ ಹೊಸ ಉಡುಪುಗಳು, ಪ್ಲೇಟ್ ಮತ್ತು ಆಹಾರ ಪದಾರ್ಥಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಇನೋವಿ ಮೋಬಿಲಿಟಿ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಧಿಕಾರಿಯದ ಶ್ರೀಮತಿ ಚಾಂದಿನಿ, ವಿನೋದ್ ಮತ್ತು ಸಜ್ಜನ ಪ್ರತಿಷ್ಠಾನದ ನಿರ್ದೇಶಕರಾದ ಮಂಜುನಾಥ್ ಆರ್ ಹಿರಿಯೂರು ರವರು ಉಪಸ್ಥಿತರಿದ್ದರು.