2015 ನೇ ಇಸವಿಯಲ್ಲಿ ಪುತ್ತೂರಿನ ಕೇಬಲ್ ಡಿಜಿಟಲ್ ಕಮ್ಯುನಿಕೇಶನ್ ಕೇಬಲ್ ನೆಟ್ವರ್ಕ್ ಮೂಲಕ ದೂರುದಾರ ಒಡೆತನದ ಸ್ಟಾರ್ ಇಂಡಿಯಾ ಪೈ ಸಂಸ್ಥೆಯ 11 ಚಾನೆಲ್ ಗಳನ್ನು ಅಂತರ್ಜಾಲ ಮುಖೇನ ಆರೋಪಿಗಳಾದ ಪುತ್ತೂರಿನ ಅಬೂಬಕ್ಕರ್. ಕೆ ಹಾಗೂ ಮಂಗಳೂರಿನ ಮನೋಜ್ ಶೆಟ್ಟಿ ಎಂಬವರು ಅಕ್ರಮವಾಗಿ ಸುಬ್ರಮಣ್ಯ ಪರಿಸರಕ್ಕೆ ರವಾನಿಸಿ ಸುಬ್ರಮಣ್ಯ ಆಸುಪಾಸಿನಲ್ಲಿರುವ ಗ್ರಾಹಕರಿಗೆ ಕೇಬಲ್ ಮೂಲಕ ಒದಗಿಸಿ ಅನಧಿಕೃತವಾಗಿ ಸ್ಟಾರ್ ಚಾನೆಲ್ ಗಳನ್ನು ಬಿತ್ತರಿಸಿ ದೂರುದಾರ ಕಂಪೆನಿಗೆ ಉದ್ದೇಶ ಪೂರ್ವಕವಾಗಿ ನಂಬಿಕೆ ದ್ರೋಹ ಮಾಡಿ, ದೂರುದಾರ ಸಂಸ್ಥೆಗೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟು ಮಾಡಿ ಕಾಪಿ ರೈಟ್ ಕಾಯಿದೆಯ ಉಲ್ಲಂಘನೆ ಮಾಡಿರುವುದಾಗಿ ಆರೋಪಿಗಳ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯ ಅಂದಿನ ಠಾಣಾಧಿಕಾರಿ ನಾಗೇಶ್ ಕದ್ರಿಯವರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಬಳಿಕ ಸಾಕ್ಷ್ಯಾಧಾರರನ್ನು ತನಿಖೆ ನಡೆಸಿ ಇತ್ತಂಡದವರ ವಾದ ಪ್ರತಿವಾದಗಳನ್ನು ಆಲಿಸಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯ ಸಿವಿಲ್ ನ್ಯಾಯಲಯ ಇದರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯಾದ ಕುಮಾರಿ ಅರ್ಪಿತಾ ರವರು ಅಭಿಯೋಜನೆಯು ಆರೋಪಿಗಳ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸುವರೇ ವಿಫಲ ಗೊಂಡಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ದಿನಾಂಕ : 01/02/2025 ರಂದು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ವಾದಿಸಿದ್ದರು.
Home ಕ್ರೈಂ ನ್ಯೂಸ್ ಸ್ಟಾರ್ ಇಂಡಿಯಾ ಪೈ ಸಂಸ್ಥೆಯ ಚಾನೆಲ್ ಗಳನ್ನು ಅಂತರ್ಜಾಲ ಮುಖೇನ ಪಡಕೊಂಡು ಅಕ್ರಮವಾಗಿ ಬಿತ್ತರಿಸಿ ಮೋಸ...

