ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಲೆಕ್ಕಪತ್ರ ಮಂಡನಾ ಸಭೆ

0

ಸುಳ್ಯ ನಗರದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಕಾರ್ತಿಕ ದೀಪೋತ್ಸವದ ಲೆಕ್ಕಪತ್ರ ಮಂಡನಾ ಸಭೆಯು ದೇವಸ್ಥಾನದ ಸಭಾಭವನದಲ್ಲಿ ಫೆ.9ರಂದು ನಡೆಯಿತು.

ದೇವಸ್ಥಾನದ ಆಡಳಿತಾಧಿಕಾರಿ ಚಂದ್ರಕಾಂತ ಅವರು ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವ ಸಮಿತಿಯ ಸಂಚಾಲಕ ಚಂದ್ರಶೇಖರ ಅಡ್ಪಂಗಾಯ ಅವರು ವರ್ಷಾವಧಿ ಜಾತ್ರೋತ್ಸವ, ಕಾರ್ತಿಕ ದೀಪೋತ್ಸವದ ಲೆಕ್ಕಪತ್ರ ಮಂಡಿಸಿದರು.
ಆಡಳಿತಾಧಿಕಾರಿ ಚಂದ್ರಕಾಂತರು ಆಡಳಿತ ವಹಿಸಿದ ಬಳಿಕ ದೇವಸ್ಥಾನದಲ್ಲಿ ಜನರೇಟರ್ ಖರೀದಿ, ಅಶ್ವಥ್ಥ ಕಟ್ಟೆಯ ರಿಪೇರಿ, ಉಗ್ರಾಣ ಕೊಠಡಿಯ ನವೀಕರಣ, ತುಲಾಭಾರ ಆಗುವ ವೇಳೆ ಹಾಕುವ ಸರದ ಖರೀದಿ, ಮದುಮಕ್ಕಳ ಕೊಠಡಿಗೆ ಗೋಡ್ರೆಜ್, ಕನ್ನಡಿ ಅಳವಡಿಕೆ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಸೇವಾ ಸಮಿತಿ ಸಂಚಾಲಕ ನವೀನ್ ಕುದ್ಪಾಜೆ ಉಪಸ್ಥಿತರಿದ್ದರು. ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಪದಾಧಿಕಾರಿಗಳು, ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆ ನೀಡಿದರು.
ಸೇವಾ ಸಮಿತಿ ಸಂಚಾಲಕ ನವೀನ್ ಕುದ್ಪಾಜೆ ಅವರು ಎರಡು ವರ್ಷಗಳ ವರಮಹಾಲಕ್ಷಿಯ ಲೆಕ್ಕಪತ್ರ ಮಂಡಿಸಿ, ವಂದಿಸಿದರು.