ನಾರಾಯಣ ನಾಯ್ಕ ಹೊಸಮಜಲು ನಿಧನ

0

ಅಮರಪಡ್ನೂರು ಗ್ರಾಮದ ಹೊಸಮಜಲು ನಾರಾಯಣ ನಾಯ್ಕರು ಅಸೌಖ್ಯದಿಂದ ಫೆ. 9ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಅಂದಾಜು 68 ವರ್ಷ ವಯಸ್ಸಾಗಿತ್ತು.
ಮೃತರು ಫೆ. 8ರಂದು ರಾತ್ರಿ ಮನೆಯಲ್ಲಿ ಕುಳಿತು ಮಾತನಾಡಿಕೊಂಡಿರುವಾಗ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿಗೆ ತಲುಪುವಾಗಲೇ ರಾತ್ರಿ 1 ಗಂಟೆಯ ಸುಮಾರಿಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಶ್ರೀಮತಿ ಸುಮತಿ, ಪುತ್ರರಾದ ಪ್ರಭಾಕರ ಹೊಸಮಜಲು, ಪ್ರಸನ್ನ ಹೊಸಮಜಲು, ಪುತ್ರಿ ಶ್ರೀಮತಿ ಚೈತ್ರ ತಾರಾನಾಥ ಬಡ್ಡಡ್ಕ, ಸಹೋದರರಾದ ಬ್ಯಾಂಕ್ ಆಫ್ ಬರೋಡಾ ನಿವೃತ್ತ ಮ್ಯಾನೇಜರ್ ಜಾಣಪ್ಪ ನಾಯ್ಕ ಹೊಸಮಜಲು, ಅಮರಮುಡ್ನೂರು ಗ್ರಾ.ಪಂ.‌ ಮಾಜಿ ಸದಸ್ಯ ಚನಿಯಪ್ಪ ನಾಯ್ಕ ಹೊಸಮಜಲು, ಸಹೋದರರಿಯರಾದ ಶ್ರೀಮತಿ ಭವಾನಿ ವೆಂಕಪ್ಪ ನಾಯ್ಕ ಅಡೂರು, ಶ್ರೀಮತಿ ಸರಸ್ವತಿ ಬಾಬು ನಾಯ್ಕ ಕೋಣಕಜೆ, ಶ್ರೀಮತಿ ವಸಂತಿ ಶೀನ‌ ನಾಯ್ಕ ಹೊಸಮಜಲು ಸೇರಿದಂತೆ ಸೊಸೆ, ಮೊಮ್ಮಗಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.