
ಡಿ.29 ರಂದು ನಡೆದ ಕೊಡಗು ಸಂಪಾಜೆ ಪಯಸ್ವಿನಿ ಪ್ರಾ ಕೃ ಪ ಸ.ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಎಲ್ಲಾ 13 ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ ಅಭಿನಂದನಾ ಸಮರ್ಪಣೆ ಮತ್ತು ಚೆಂಬು ,ಸಂಪಾಜೆ ಶಕ್ತಿಕೇಂದ್ರ ವ್ಯಾಪ್ತಿಯ ಬೃಹತ್ ಬಿಜೆಪಿ ಸಮಾವೇಶವನ್ನು ಬಾಲಂಬಿ ಸೊಸೈಟಿಯ ಆವರಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದ ಮಾಜಿ ವಿಧಾನಸಭಾದ್ಯಕ್ಷ ಶ ಕೆ.ಜಿ ಬೋಪಯ್ಯರವರು ಮಾತನಾಡಿ ಚೆಂಬು ಸಂಪಾಜೆ ಮತ್ತು ಪೆರಾಜೆ ಗ್ರಾಮಗಳಲ್ಲಿ ಬಿಜೆಪಿಯ ಸಂಘಟನಾ ಶಕ್ತಿ ಇಡೀ ಕೊಡಗು ಜಿಲ್ಲೆಗೇ ಮಾದರಿ ಎಂದು ಪ್ರಶಂಸಿಸಿದರು.
ಸಂಘದ ಅದ್ಯಕ್ಷರಾದ ಶ್ರೀ. ಅನಂತ್ ಊರುಬೈಲುರವರು ತಮ್ಮಪ್ರಾಸ್ತಾವಿಕ ನುಡಿಯಲ್ಲಿ ಪಯಸ್ವಿನಿ ಸೊಸೈಟಿಯ ಸುವರ್ಣ ಮಹೋತ್ಸವ ಮತ್ತು ಬಿಜೆಪಿ ಆಡಳಿತದ ರಜತ ವರ್ಷಾಚರಣೆ ಸಂದರ್ಭದಲ್ಲಿ ಸದಸ್ಯರು ನೀಡಿದ ಅಭೂತಪೂರ್ವ ಗೆಲುವನ್ನು ಸಂಘದ ಸದಸ್ಯರಿಗೆ ಅರ್ಪಿಸಿ ,ಸದಸ್ಯರ ವಿಶ್ವಾಸಕ್ಕೆ ದಕ್ಕೆಯಾಗದಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.ಕೊಡಗು ಜಿಲ್ಲಾ ಬಿಜೆಪಿ ಅದ್ಯಕ್ಷ ಶ್ರೀ. ರವಿ ಕಾಳಪ್ಪ ,ಮಾಜಿ ಅದ್ಯಕ್ಷ ಶ್ರೀ.ಮನು ಮುತ್ತಪ್ಪ ಉಪಾಧ್ಯಕ್ಷ ಶ್ರೀ. ಕಾಂಗೀರ ಅಶ್ವಿನ್,ಮಡಿಕೇರಿ ಗ್ರಾಮಾಂತರ ಮಂಡಲ ಅದ್ಯಕ್ಷ ಶ್ರೀ. ನಾಗೇಶ್ ಕುಂದಲ್ಪಾಡಿರವರು ಮತದಾರರನ್ನು ಮತ್ತು ನೂತನ ಆಡಳಿತ ಮಂಡಳಿಯವರನ್ನು ಅಭಿನಂದಿಸಿದರು.
ಚೆಂಬು ಶಕ್ತಿ ಕೇಂದ್ರ ಅದ್ಯಕ್ಷ ಶ ಸುಬ್ರಹ್ಮಣ್ಯ ಉಪಾದ್ಯಾಯರು ಅದ್ಯಕ್ಷತೆ ವಹಿಸಿದ್ದು, ಉದಯ ಹನಿಯಡ್ಕ, ತೀರ್ಥರಾಮ ಪೂಜಾರಿಗದ್ದೆ, ಶ್ರೀಮತಿ ರಮಾದೇವಿ ಕಳಗಿ , ಯಶವಂತ ದೇವರಗುಂಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶೋಧರ ಬಿ ಜೆ ಸ್ವಾಗತಿಸಿ ,. ಇಂದಿರೇಶ್ ವಂದಿಸಿದರು.ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.