ಸ್ವಲಾತ್‌ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭ ಮನೆಯಲ್ಲಿ ಇದ್ದ ಲಕ್ಷ ಮೌಲ್ಯದ ಚಿನ್ನಾಭರಣ ಕಳವು

0

ಬೆಳ್ಳಾರೆ ಠಾಣೆಯಲ್ಲಿ ದೂರು, ಪ್ರಕರಣ ದಾಖಲು

ಮಸೀದಿಯಲ್ಲಿ ಸ್ವಲಾತ್ ಕಾರ್ಯಕ್ರಮಕ್ಕೆ ಮನೆಯವರು ತೆರಳಿದ್ದ ಸಂಧರ್ಭ ಮನೆಯಲ್ಲಿ ಇದ್ದ ಚಿನ್ನಾಭರಣ ಕಳ್ಳತನ ನಡೆದ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಂದೂರು ಗ್ರಾಮದ ಗುಂಡಿನಾರು ನಿವಾಸಿ ಮೊಹಮ್ಮದ್‌ ಆರಿಫ್‌ ಅವರು ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೆ.6 ರಂದು ಸಂಜೆ ಸುಮಾರು 6.30 ಗಂಟೆಗೆ ತಂಗಿ ಆರೀಫಾರವರು ಮನೆಗೆ ಬೀಗ ಹಾಕಿ ತಂದೆ ಸುಲೈಮಾನ್‌, ತಾಯಿ ರೆಹಮತ್‌, ತಮ್ಮ ಆಸೀಫ್‌ನೊಂದಿಗೆ ಬೈತಡ್ಕ ಮಸೀದಿಯ ವಾರ್ಷಿಕ ಸ್ವಲಾತ್‌ ಕಾರ್ಯಕ್ರಮಕ್ಕೆ ತೆರಳಿ ರಾತ್ರಿ ಸ್ವಲಾತ್‌ ಕಾರ್ಯಕ್ರಮ ಮುಗಿಸಿ ತಮ್ಮ ಆಸೀಫ್‌ ರವರ ಮನೆಯಲ್ಲಿ ಮಲಗಿದ್ದರು.

ಫೆ. 7 ರಂದು ಮನೆಗೆ ಬಂದಾಗ ಹಿಂಬಾಗಿಲು ಒಡೆದು ಮನೆಯೊಳಗೆ ಕಳ್ಳರು ಕಳವು ನಡೆಸಿದ ಕೃತ್ಯ ತಿಳಿದು ಬಂದಿದೆ.

ಕಪಾಟಿನೊಳಗಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಬ್ರಾಸ್‌ ಲೆಟ್‌ 1, ಸುಮಾರು 6 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್‌ 1, ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರ 1, ಸುಮಾರು 4 ಗ್ರಾಂ ತೂಕದ ಚಿನ್ನ ಇರುವ ಮುತ್ತಿನ ಸರ 1, ಸುಮಾರು 8 ಗ್ರಾಂ ತೂಕದ ಚಿನ್ನದ ಸರ 1, ಹೀಗೆ ಒಟ್ಟು 1.43 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಕಂಡುಬಂದಿದೆ ಎಂದು ದೂರು ನೀಡಿದ್ದು,ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.