ಭಕ್ತಿ,ಸಂಭ್ರಮದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ

0

ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದ್ದು ಫೆ.9 ರಂದು ಬೆಳಿಗ್ಗೆ ಶತರುದ್ರಾಭಿಷೇಕ,ಅಶ್ವಥ್ಥನಾರಾಯಣ ಪೂಜೆ,108 ಕಾಯಿ ಗಣಪತಿ ಹೋಮ ನಡೆಯಿತು.


ನಂತರ ಕಲಶಾಭಿಷೇಕಗಳು,ಮಹಾಪೂಜೆ,ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ರಾತ್ರಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.
ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ,ವಸಂತ ಕಟ್ಟೆ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ವ್ಯ.ಸ.ಸದಸ್ಯರು ಹಾಗು ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.