ಶ್ರೀಮತಿ ಗಿರಿಜಾ ಪರಿವಾರಕಾನ ನಿಧನ

0

ಸುಳ್ಯ ಕಸಬಾ ಗ್ರಾಮದ ಪರಿವಾರಕಾನ ದಿ. ವೀರಪ್ಪ ನಾಯ್ಕರವರ ಪತ್ನಿ ಶ್ರೀಮತಿ ಗಿರಿಜಾ ರವರು ದೀರ್ಘಕಾಲದ ಅಸೌಖ್ಯದಿಂದ ಫೆ. 10 ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ, ಪುತ್ತೂರಿನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಜಯಪ್ರಕಾಶ್, ಪುತ್ರಿಯರಾದ ಶ್ರೀಮತಿ ಯಶೋಧ ಸುಧಾಕರ ಪಡ್ನೂರು, ಶ್ರೀಮತಿ ವಿನೋದ ನಾರಾಯಣ ನಾಯ್ಕ ಮರೀಲ್, ಶ್ರೀಮತಿ ಸರೋಜಾ ಈಶ್ವರ ವಾರಣಾಸಿ, ಶ್ರೀಮತಿ ಜಯಂತಿ ಪ್ರಶಾಂತ ಮುಳ್ಳೇರಿಯಾ, ಶ್ರೀಮತಿ ಸವಿತಾ ಯಶವಂತ ಬೆಂಗಳೂರು, ಅಳಿಯಂದಿರು, ಸಹೋದರ ಕೂಸಪ್ಪ ನಾಯ್ಕ ಬಿರ್ಮನಕಜೆ, ನಾಲ್ವರು ಸಹೋದರಿಯರು, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.