ಅಜ್ಜಾವರದಲ್ಲಿ ಕೆಡ್ಡಸ ಆಚರಣೆ

0

ಚೈತ್ರ ಯುವತಿ ಮಂಡಲ ಅಜ್ಜಾವರ , ಪ್ರತಾಪ ಯುವಕ ಮಂಡಲ ಅಜ್ಜಾವರ ಹಾಗೂ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ತುಳುನಾಡಿನ ವಿಶಿಷ್ಟ ಪರ್ಬವಾದ ಕೆಡ್ಡಸ ಆಚರಣೆ ಕಾರ್ಯಕ್ರಮ ಮಾವಿನಪಳ್ಳದಲ್ಲಿ ನಡೆಯಿತು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ವಹಿಸಿದ್ದರು. ಕೆಡ್ಡಸ ಆಚರಣೆಯ ಮಹತ್ವದ ಬಗ್ಗೆ ಮಾಹಿತಿಯನ್ನು ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕರ್ಲಪ್ಪಾಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಆಗಿರುವ ರಾಜೇಶ್ ಶೆಟ್ಟಿ ಮೇನಾಲ ನೀಡಿದರು.
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಎಲ್ಲರಿಗೂ ಕೆಡ್ದಸದ ವಿಶೇಷ ತಿನಿಸು ನನ್ನೇರಿಯನ್ನು ವಿತರಿಸಲಾಯಿತು.
ಜೇಸಿಐ ಸುಳ್ಯ ಪಯಸ್ವಿನಿ ಕಾರ್ಯದರ್ಶಿ ಲತಾ ಸುಪ್ರಿತ್ ಮೊಂಟಡ್ಕ ಸ್ವಾಗತಿಸಿ, ಯುವಕ ಮಂಡಲ ಕಾರ್ಯದರ್ಶಿ ನವೀನ್ ಕೂಕುಲುಮಜಲು ಧನ್ಯವಾದ ಮಾಡುವುದರೊಂದಿಗೆ, ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಖಜಾಂಜಿ ಕು. ಲಕ್ಷ್ಮೀ ಪಲ್ಲತ್ತಡ್ಕ, ಗೌರವಾ ಸಲಹೆಗಾರರಾದ ಚನಿಯ ಕಲ್ತಡ್ಕ,ಕಾರ್ಯಕಾರಿಣಿ ಸಮಿತಿ ಸದಸ್ಯೆ ಪವಿತ್ರ ಮಾವಿನಪಳ್ಳ,ದಿವ್ಯ ಗೋರಡ್ಕ,ಮಹಮ್ಮಾಯಿ ದೇವಸ್ಥಾನ ಮೊಕ್ತೇಸರ ಕುಸಲ,ಸುಶೀಲ, ರಾಜೇಶ್, ವಿಶ್ವಾನಾಥ ಹಾಗೂ ಊರಿನವರು ಉಪಸ್ಥಿತರಿದ್ದರು.