ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರುಗಳನ್ನು ನೇಮಕಗೊಳಿಸಿ, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಆದೇಶ ಹೊರಡಿಸಿದೆ.
ವ್ಯವಸ್ಥಾಪನ ಸಮಿತಿ ಸದಸ್ಯರುಗಳಾಗಿ ಶ್ರೀ ಕ್ಷೇತ್ರದ ಪ್ರದಾನ ಅರ್ಚಕ ಶ್ರೀವರ ಪಾಂಗಣ್ಣಾಯ, ಹರಿಪ್ರಕಾಶ್ ಅಡ್ಕಾರು, ಪುರುಷೋತ್ತಮ ನಂಗಾರು, ವಿನೋದ್ ಮಹಾಬಲಡ್ಕ, ವಿಜಯಕುಮಾರ್ ನರಿಯೂರು, ಹೇಮಚಂದ್ರ ಕುತ್ಯಾಳ, ಶ್ರೀಮತಿ ಪವಿತ್ರ ಭಾರತಿ ಕೋನಡ್ಕಪದವು, ಶ್ರೀಮತಿ ಸೌಮ್ಯಲಕ್ಷ್ಮಿ ಬೈತಡ್ಕ, ಶ್ರೀಮತಿ ಸುಮತಿ ಹುಲಿಮನೆ ನೇಮಕಗೊಂಡಿದ್ದಾರೆ.
ನೂತನ ವ್ಯವಸ್ಥಾಪನ ಸಮಿತಿಯು ವತಿಯಿಂದ ನಾಳೆ ಫೆ.12ರಂದು ದೇವಸ್ಥಾನದ ಆಡಳಿತಾಧಿಕಾರಿಗಳಿಂದ ಅಧಿಕಾರ ಸ್ವೀಕರಿಸಲಿರುವುದಾಗಿ ತಿಳಿದುಬಂದಿದೆ.