ಝಿಯಾರತ್ ಪ್ರವಾಸ ಕಲ್ಪಿಸುವ ಟೂರ್ಸ್ ಅಂಡ್ ಟ್ರಾವೆಲ್ಸ್ ಗಳು ಸಾಮಾಜಿಕ ಚಿಂತನೆಯಲ್ಲಿ ಬೆಳೆಯಬೇಕು :ಅಶ್ರಫ್ ಖಾಮಿಲ್ ಸಖಾಫಿ
ಗಾಂಧಿನಗರ ಪಿ ಎ ಆರ್ಕೆಡ್ನಲ್ಲಿ ಕಾರ್ಯಾಚರಿಸುತ್ತಿರುವ ಹಾಫಿಲ್ ಶೌಖತ್ ಅಲಿ ಸಖಾಫಿ ರವರ ಮಾಲಕತ್ವದ ಬರಕಾತ್ ಕಲೆಕ್ಷನ್ ಸಂಸ್ಥೆಯಲ್ಲಿ ನೂತನವಾಗಿ ಅಲ್ ಇಹ್ ಸಾನ್ ಟೂರ್ಸ್ ಅಂಡ್ ಟ್ರಾವೆಲ್ಸ್ ಕಚೇರಿಯ ಉದ್ಘಾಟನಾ ಸಮಾರಂಭ ಫೆ.10 ರಂದು ನಡೆಯಿತು.

ಗಾಂಧಿನಗರ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ರವರು ನೂತನ ಕಚೇರಿಯನ್ನು ಉದ್ಘಾಟಿಸಿ ದುವಾ ನೆರವೇರಿಸಿ ಮಾತನಾಡಿ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತಹ ಜಿಯಾರತ್ ಟೂರುಗಳ ಸಂಸ್ಥೆಗಳು ಸಾಮಾಜಿಕ ಚಿಂತನೆಗಳಿಂದ ಕೂಡಿರಬೇಕು. ಅದನ್ನು ನಿಯಂತ್ರಿಸುವ ಅಮಿರುಗಳು ತಮ್ಮನ್ನು ಅನುಸರಿಸಿ ಬರುವ ಯಾತ್ರಿಕರಿಗೆ ಉತ್ತಮ ಸಂದೇಶ ಮತ್ತು ಮಾಹಿತಿ ನೀಡುವಲ್ಲಿ ಯಶಸ್ವಿ ಪಾತ್ರವನ್ನು ವಹಿಸುವಂಥವರಾಗಿರಬೇಕು. ಕೇವಲ ಆರ್ಥಿಕ ಲಾಭ ನಷ್ಟಗಳ ಬಗ್ಗೆನೇ ಚಿಂತಿಸುವ ಮನಸ್ಸಿನಿಂದ ಇಂತಹ ಸಂಸ್ಥೆಗಳನ್ನು ಮಾಡಬಾರದು ಎಂದು ಹೇಳಿದರು.ಈ ಸಂಸ್ಥೆಯಿಂದ ಜನರಿಗೆ ಉತ್ತಮ ಸೇವೆ ಲಭಿಸಲಿ ಎಂದು ಶುಭಾರೈಸಿದರು.

ಮೀಫ್ ಉಪಾಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ರವರು ಯಾತ್ರಿಕರ ಪಾಸ್ ಪೋರ್ಟ್ ಅಸ್ಥಾಂತರಿಸಿ ಟ್ರಾವೆಲ್ಸ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಕ್ತ ಧಾನಿ ಹಾಗೂ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ,ಸುದ್ದಿ ಸಮೂಹ ಸಂಸ್ಥೆಯ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ, ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಸುದ್ದೀನ್ ಅರಂಬೂರುರವರು ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ಗಾಂಧಿನಗರ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್, ಸುಳ್ಯ ಆನ್ಸಾರುಲ್ ಮುಸ್ಲಿಮೀನ್ ಅಸೋಷಿಯೇಷನ್ ಇದರ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೇಕ್ಕಾರ್ಸ್ ,ಉದ್ಯಮಿಗಳಾದ ಹಾಜಿ ಹಸ್ಸನ್ ಬಾಳೆ ಮಕ್ಕಿ,ಅಬ್ದುಲ್ ರಶೀದ್ ಕಮ್ಮಾಡಿ,ಹಾಜಿ ಎ ಕೆ ಎಸ್ ಮಹಮ್ಮದ್,ಸಿದ್ಧಿಕ್ ಕಟ್ಟೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಮೀರ್ ಹಾಫಿಲ್ ಶಖತ್ ಅಲಿ ಸಖಾಫಿ ರವರು ಮಾತನಾಡಿ ಜೂನ್ ತಿಂಗಳ ಕೊನೆಯ ವಾರದಲ್ಲಿ ಇರಾಕ್ ಯಾತ್ರೆಯೊಂದಿಗೆ ಪವಿತ್ರ ಮಕ್ಕ ಮದೀನದಲ್ಲಿ ಉಮ್ರಾ ನಿರ್ವಹಣೆಗೆ ಸದಾವಕಾಶ ವಿದ್ದು ಯಾತ್ರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೇಳಿಕೊಂಡರು. ಅಲ್ಲದೆ ನಮ್ಮ ದೇಶದ ವ್ಯಾಪ್ತಿಯಲ್ಲಿರುವ ಝಿಯಾರತ್ ಪುಣ್ಯ ಕೇಂದ್ರಗಳಿಗೆ ಸಂದರ್ಶನಕ್ಕೆ ನಮ್ಮ ಸಂಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಕೇಳಿಕೊಂಡರು.
ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಅಂಗಡಿಯ ಮಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.