
ಶಿವಜ್ಯೋತಿ ಯೋಗ ಕೇಂದ್ರ ಇದರ 21ನೇ ವಾರ್ಷಿಕೋತ್ಸವದ ಅಂಗವಾಗಿ ಯೋಗಪಟುಗಳಿಗೆ ಹಾಗೂ ಯೋಗ ಶಿಕ್ಷಕರಿಗೆ ಯೋಗ ಪ್ರತಿಭಾ ಪ್ರಶಸ್ತಿ ಪುರಸ್ಕಾರ – 2025 ಸಮಾರಂಭವು ಇತ್ತೀಚೆಗೆ ಆನ್ಲೈನ್ ನಲ್ಲಿ ನಡೆಸಲಾಗಿದ್ದು, ಈ ಪ್ರಶಸ್ತಿಗೆ ಐವರ್ನಾಡು ಗ್ರಾಮದ ಮಿಥುನ ಅಶ್ವತ್ ಜಬಳೆಯವರು ಆಯ್ಕೆಯಾಗಿದ್ದಾರೆ.
ಸುಮಾರು 600 ಯೋಗ ಪ್ರತಿಭೆಗಳಿಗೆ ಈ ಪ್ರಶಸ್ತಿ ನೀಡಿದ್ದಾರೆ.

ಇವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್‌ರವರ ಪತ್ನಿ. ಪಂಬೆತ್ತಾಡಿ ಗ್ರಾಮದ ಬಾಬ್ಲುಬೆಟ್ಟು ಬಾಬು ಗೌಡ ಮತ್ತು ಚಂದ್ರಾವತಿ ದಂಪತಿಗಳ ಪುತ್ರಿ.