ಮುಂಡೋಡಿ ವಾರಿಯರ್ಸ್ ಪ್ರಥಮ , ಅಕ್ಷಯ ಮೊಬೈಲ್ಸ್ ದ್ವಿತೀಯ
ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ ಕಂದ್ರಪ್ಪಾಡಿ ಇದರ ಆಶ್ರಯದಲ್ಲಿ 4ನೇ ವರ್ಷದ 6 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಫೆ2 ರಂದು ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕರಾದ ಕುಶಾಲಪ್ಪ ಗೌಡ ರುದ್ರಚಾಮುಂಡಿ ನೆರವೇರಿಸಿದರು, ಶಾಶ್ವತ ಫಲಕವನ್ನು ನಿವೃತ ಶಿಕ್ಷಕರಾದ ಬಾಲಕೃಷ್ಣ ಗೌಡ ಹಿರಿಯಡ್ಕ ಇವರು ಅನಾವರಣಗೊಳಿಸಿದರು, ಕಂದ್ರಪ್ಪಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಣಿ ಪುರುಷೋತ್ತಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. .ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ ಕಂದ್ರಪ್ಪಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಕಂದ್ರಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾ.ಪಂ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರಾದ ವಿಜೇಶ್ ಹಿರಿಯಡ್ಕ , ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಇದರ ಅಧ್ಯಕ್ಷ ಉದಯ ಮುಂಡೋಡಿ, ಉದ್ಯಮಿಗಳಾದ ಉಮೇಶ್ ಮುಂಡೋಡಿ, ಕಂದ್ರಪ್ಪಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ವೀಣಾ ಮತ್ತು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ ಕಂದ್ರಪ್ಪಾಡಿ ಕ್ರೀಡಾ ಕಾರ್ಯದರ್ಶಿಯಾದ ರಜತ್ ಮುಂಡೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಕಂದ್ರಪ್ಪಾಡಿ ಶಾಲೆಗೆ ಚಯರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ತಿಕ್ ದೇವ ಕಾರ್ಯಕ್ರಮ ನಿರೂಪಣೆ ಮಾಡಿದರು.
ಫಲಿತಾಂಶ:
6 ತಂಡಗಳ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಉಮೇಶ್ ಮುಂಡೋಡಿ ಮಾಲಕತ್ವದ ಮುಂಡೋಡಿ ವಾರಿಯರ್ಸ್ ಪ್ರಥಮ ಸ್ಥಾನ, ರಮಿತ್ ಹೆಡ್ಡನಮನೆ ಮತ್ತು ಮದನ್ ಕೊಲ್ಯ ಮಾಲಕತ್ವದ ಅಕ್ಷಯ ಮೊಬೈಲ್ಸ್ ದ್ವಿತೀಯ, ಸಾಧ್ವಿ ಕ್ರಿಕೆಟರ್ಸ್ ತೃತೀಯ ಮತ್ತು ಎಸ್.ಎಮ್.ಸಿ. ಮುಳ್ಳುಬಾಗಿಲು ಚತುರ್ಥ ಬಹುಮಾನವನ್ನು ಪಡೆದುಕೊಂಡಿತು. ವೈಯಕ್ತಿಕ ಬಹುಮಾನಗಳಾದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಶೃಜನ್ ಮುಂಡೋಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಸನ್ನ ಕಾಯರ, ಉತ್ತಮ ದಾಂಡಿಗನಾಗಿ ರಜತ್ ಮುಂಡೋಡಿ, ಉತ್ತಮ ಎಸೆತಗಾರ ರೇವಂತ್ ಹೆಡ್ಡನಮನೆ, ಉತ್ತಮ ಗೂಟರಕ್ಷಕ ನಿಶಿತ್ ಮುಂಡೋಡಿ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ಓಂ ಪ್ರಸಾದ್ ವಾಲ್ತಾಜೆ ಪಡೆದುಕೊಂಡರು