ಆಲೆಟ್ಟಿ ಸದಾಶಿವ ಸಭಾಭವನದ ನೂತನ ವೇದಿಕೆ ಡಾ.ಕೆ.ವಿ.ಸಿ ಯವರಿಂದ ಲೋಕಾರ್ಪಣೆ

0

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕಮನೆಯವರಿಂದ ಕೊಡುಗೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಸದಾಶಿವ ಸಭಾಭವನಕ್ಕೆ ನೂತನ ವೇದಿಕೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಗುತ್ತಿಗೆದಾರರಾದ ತೀರ್ಥಕುಮಾರ್ ಕುಂಚಡ್ಕ ಮತ್ತು ಮನೆಯವರು ಕೊಡುಗೆಯಾಗಿ ನಿರ್ಮಿಸಿಕೊಟ್ಟರು.

ಶ್ರೀಮತಿ ಕಮಲ ಮತ್ತು ದುಗ್ಗಪ್ಪ ಗೌಡ ಕುಂಚಡ್ಕ ರವರ ಸ್ಮರಣಾರ್ಥವಾಗಿ ಅಂದಾಜು ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದ್ದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷಡಾ.ಕೆ.ವಿ.ಚಿದಾನಂದ ರವರು ಲೈಟ್ ಬಟನ್ ಒತ್ತುವ ಮೂಲಕ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು. ಸಭಾಭವನದಲ್ಲಿ ಅಂದಾಜು ಸುಮಾರು 2000 ಮಂದಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಲು ಸಕಲ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಅನುವಂಶಿಕ ಮೊಕ್ತೇಸರರು ಸ್ಥಳೀಯ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.