ಸುಳ್ಯ : ಸ್ಟ್ರೀಟ್‌ ಲೈಟ್ ಕಂಬಕ್ಕೆ ಗುದ್ದಿದ ಲಾರಿ

0

ಸುಳ್ಯ‌ಮುಖ್ಯ ರಸ್ತೆಯಲ್ಲಿ ಸ್ಟ್ರೀಟ್ ಲೈಟ್ ಕಂಬಕ್ಕೆ ಲಾರಿ ಗುದ್ದಿ ಹಾನಿಯಾಗಿರುವ ಘಟನೆ ವರದಿಯಾಗಿದೆ.

ಇಂದು ಮುಂಜಾನೆ ಸುಮಾರು 5ರ ವೇಳೆ ಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗಾಂಧಿನಗರ ‌ಕಡೆಯಿಂದ ಬಂದ ಲಾರಿ ಸುಳ್ಯದ ಬಾಳೆಮಕ್ಕಿಯಲ್ಲಿ ರಸ್ತೆ ಬದಿಯ ಸ್ಟ್ರೀಟ್ ಲೈಟ್ ಕಂಬಕ್ಕೆ ಡಿಕ್ಕಿಯಾಗಿದೆ. ತಡೆಬೇಲಿಗೂ ಹಾನಿಯಾಗಿದೆ.‌ ಲಾರಿಯ ಮುಂಭಾಗ ಜಖಂ ಗೊಂಡಿರುವುದಾಗಿ ತಿಳಿದುಬಂದಿದೆ.