ಹೈದರಾಬಾದ್ ನ್ಯಾಷನಲ್ ಯೂನಿವರ್ಸಿಟಿ ನಡೆಸಿದ internatinal conference on plant human interactions for sustainable development (ICPHISD-2025) ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಸಂಶೋಧನಾ ವಿದ್ಯಾರ್ಥಿನಿ, ಶ್ರೀಮತಿ ಸುಶ್ಮಿತಾ ಆದಿತ್ಯ ಚಿದ್ಗಲ್ಲು ಇವರು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ , ಅಂತರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ Best Oral presentation ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಬೇರೆ ಬೇರೆ ದೇಶಗಳಿಂದ ಸುಮಾರು 70 ಮಂದಿ ಸಂಶೋಧಕರು ಈ ಕಾನ್ಫರೆನ್ಸ್ ನಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿದ್ದರು.
ಇವರು ಪ್ರಸ್ತುತ ಸಂಶೋಧನೆಯೊಂದಿಗೆ ಪ್ರಸನ್ನ ಪಿಯು ಕಾಲೇಜು ಬೆಳ್ತಂಗಡಿ ಇಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಮಾರುತಿ ಕೆಆರ್ ಅವರ ಮಾರ್ಗದರ್ಶನದಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆಯುತ್ತಿದ್ದಾರೆ.
ಇವರು ಕೆ ಎಂ ಎಫ್ ಉದ್ಯೋಗಿ ಆದಿತ್ಯ ಚಿದ್ಗಲ್ಲು ಇವರ ಪತ್ನಿ.
ಕಡಪಳ ಯಾದವೇಂದ್ರ ಮತ್ತು ಮನೋರಮ ದಂಪತಿಗಳ ಪುತ್ರಿ. ಚಿದ್ಗಲ್ಲು ಭಾಸ್ಕರಗೌಡ ಹಾಗೂ ಚಂದ್ರಾವತಿಯವರ ಸೊಸೆ.