ನಿಂತಿಕಲ್ಲು ಪೇಟೆಯ ಪಕ್ಕದಲ್ಲಿ ಕಾಮಗಾರಿಯೊಂದು ನಡೆಯುತ್ತಿದ್ದು, ಇದರಿಂದ ಉದ್ಭವಿಸುವ ಧೂಳು ಪೇಟೆಯ ಅಂಗಡಿಗಳನ್ನು ಆವರಿಸುತ್ತಿರುವುದಾಗಿ ಸ್ಥಳೀಯ ಅಂಗಡಿಯವರು ಆರೋಪಿಸಿದ್ದಾರೆ. ಅಂಗಡಿ, ಹೋಟೆಲ್ ಗಳ ಆಹಾರ ಪದಾರ್ಥಗಳು ಧೂಳಿನಿಂದ ತುಂಬಿ ಹೋಗಿದ್ದು, ಇನ್ನಾದರೂ ಕಾಮಗಾರಿ ನಡೆಸುವವರು ಧೂಳು ಏಳದ ಹಾಗೆ ನೀರು ಹಾಕಿ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.


