ಕೊಲ್ಲಮೊಗ್ರ ಗ್ರಾಮದ ಚಾಂತಾಳ ದಿ. ಗಣಪತಿ ಗೌಡರ ಪುತ್ರ ಸಚಿನ್ ಚಾಂತಾಳ ಅವರು ಅಸೌಖ್ಯದಿಂದಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಫೆ.16ರಂದು ಸಂಜೆ ನಿಧನರಾದರು. ಅವರಿಗೆ 38 ವರ್ಷ ವಯಸ್ಸಾಗಿತ್ತು.
ಅಸೌಖ್ಯದಿಂದ ಇದ್ದ ಅವರನ್ನು ಕಳೆದ ಮೂರು ದಿನಗಳ ಹಿಂದೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಸಚಿನ್ ಅವರು ಕಳೆದ ಎಂಟು ವರ್ಷಗಳಿಂದ ಜಾಲ್ಸೂರು ಗ್ರಾಮದ
ಕೋನಡ್ಕಪದವಿನಲ್ಲಿ ನೇಸರ ಮಿನರಲ್ ವಾಟರ್ ಮಯೂರ ಇಂಡಸ್ಟ್ರೀಸ್ ಸಂಸ್ಥೆ ನಡೆಸುತ್ತಿದ್ದರು.
ಮೃತರು ತಾಯಿ ನಿವೃತ್ತ ಶಿಕ್ಷಕಿ ಬೊಳಿಯಮ್ಮ, ಪತ್ನಿ ನಿವೇದಿತಾ, ಓರ್ವ ಪುತ್ರ ನೃಪಾಲ್, ಸಹೋದರ ಸವಿನ್ ಚಾಂತಾಳ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.