ವೈಭವದಿಂದ ನಡೆದ ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮಹೋತ್ಸವ

0

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಗಡಿಕಲ್ಲು ಇದರ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು 2021 ರಿಂದ ಅನ್ವಯಿಸಿ 5 ನೇ ವರ್ಷದ ಉತ್ಸವ ಫೆ.15 ಮತ್ತು ಫೆ.16 ರಂದು ನಡೆಯಿತು.

ಫೆ.15ರಂದು ಬೆಳಗ್ಗೆ ಅಗ್ನಿಕುಂಡ ಜೋಡಣೆ ನಡೆಯಿತು. ಬಳಿಕ ಗಣ ಹೋಮ, ಉಗ್ರಾಣ ಮೂಹರ್ತ ನಡೆದು ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ದೈವಸ್ಥಾನದಿಂದ ಭಂಡಾರ ತೆಗೆದು ಬಳಿಕ ತೊಡಂಙಲ್ ನಡೆದು ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಿತು . ರಾತ್ರಿ ಅಂಗನವಾಡಿ ಪುಟಾಣಿ ಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ತಡ ರಾತ್ರಿ ತನಕ ನಡೆಯಿತು. ರಾತ್ರಿ ಶ್ರೀ ದೈವದ ಕುಳ್ಚಾಟ ನಡೆಯಿತು. ಬೆಳಗ್ಗಿನ ಜಾವ ಶ್ರೀ ವಿಷ್ಣು ಮೂರ್ತಿ ದೈವದ ಅಗ್ನಿ ಪ್ರವೇಶ ನಡೆದು ಬಾರಣೆ, ಮಾರಿಕಳ ಗುಳಿಗ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು.


ರಾತ್ರಿ ಗೆಳೆಯರ ಬಳಗತಂಬಿನಡ್ಕ, ಕೊಲ್ಲಮೊಗ್ರು ಇವರಿಂದ ಸಾರ್ವಜನಿಕ ಭಕ್ತಾದಿ ಜನರಿಗೆ ಅನ್ನ ಸಂತರ್ಪಣೆ ಸೇವೆ ನಡೆಯಿತು. ಕಾರ್ಯಕ್ರಮ ಯಶಸ್ವಿಯಾಗಿ ಶಿಸ್ತು ಬದ್ದವಾಗಿ ನಡೆಯಿತು. ಕಾರ್ಯಕ್ರಮ ಯಶಸ್ವಿಗೆ ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಕುಮಾರ್ ಮಡ್ತಿಲ, ಕಾರ್ಯದರ್ಶಿ ನಾರಾಯಣ ಪನ್ನೆ, ಉಪಾಧ್ಯಕ್ಷ ಸತೀಶ್ ಟಿ.ಎನ್ ಕೆರೆಕ್ಕೋಡಿ, ಲವಿತ್ ಪಡ್ಪು, ಕೋಶಾಧಿಕಾರಿ ಅನಂತರಾಮ ಮಣಿಯಾನ, ಜತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು, ಪ್ರಧಾನ ಪೂಜಾರಿ ರಾಮಚಂದ್ರ ಕುಲ್ಕುಂದ, ಸದಸ್ಯರುಗಳಾದ ಕೆ.ಕೆ ವೆಂಕಟರಮಣ ಕೊಪ್ಪಡ್ಕ, ಉಮೇಶ್ ಆಚಾರ್ಯ ಕೊಲ್ಲಮೊಗ್ರು, ಗೋಪಾಲ ಗೌಡ ಕೊಪ್ಪಡ್ಕ, ಶ್ರೀಮತಿ ಶಾಲಿನಿ ನಾರಾಯಣ ಗಡಿಕಲ್ಲು, ಶ್ರೀಮತಿ ತೇಜಾವತಿ ಗಿರೀಶ್ ಅಂಬೆಕಲ್ಲು ಹಾಗೂ ಸಮಿತಿಯ ಇತರೇ ಸದಸ್ಯರು, ಭಕ್ತಾದಿಗಳು ಸಹಕರಿಸಿದರು.