ದಲಿತ ಸೇವಾ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ
ಬೂಡು ಪರಿಸರದ ಅಂಗಡಿ ಮೊಟ್ಟೆ ಎಂಬಲ್ಲಿ ಧರ್ಮ ದೈವ ಪಂಜುರ್ಳಿ ದೈವಸ್ಥಾನ ನಿರ್ಮಾಣಗೊಳ್ಳುವಲ್ಲಿ ಸ್ಥಳೀಯ ನಿವಾಸಿಗಳಾದ ಸುರೇಶ್ ಎಂ ಹಾಗೂ ಕುಸುಮಾವತಿ ಎಂಬುವವರು ರಸ್ತೆಗೆ ಗೇಟು ನಿರ್ಮಿಸಿ ರಸ್ತೆಯನ್ನು ಬಂದು ಮಾಡಿದ್ದಾರೆ ಎಂದು ಆರೋಪಿಸಿ ಕೂಡಲೇ ಗೇಟು ತೆರವುಗೊಳಿಸಿ ಕೊಡಬೇಕೆಂದು ಆಗ್ರಹಿಸಿ ದಲಿತ ಸೇವಾ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಫೆ. ೧೭ ರಂದು ದಲಿತ್ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದ. ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರೆ ಕಾಡು ‘ಧಾರ್ಮಿಕ ಕೇಂದ್ರಗಳು ಸಾರ್ವಜನಿಕರಿಗಾಗಿ ನಿರ್ಮಾಣಗೊಳ್ಳುವ ಕೇಂದ್ರವಾಗಿದೆ.

ಅಲ್ಲದೆ ಇಲ್ಲಿ ನಿರ್ಮಾಣ ಗೊಳ್ಳಲು ಸಿದ್ದವಾಗಿರುವ ದೈವಸ್ಥಾನಕ್ಕೆ ಮುಖ್ಯ ಸಂಪರ್ಕ ರಸ್ತೆ ಇದಾಗಿದ್ದು, ಇದನ್ನು ಗೇಟ್ ನಿರ್ಮಾಣ ಮಾಡಿ ಬಂದ್ ಮಾಡಿರುವುದು ಸರಿಯಲ್ಲ. ಅಲ್ಲದೆ ಇದು ಎರಡನೇ ಭಾರಿಗೆ ಈ ರೀತಿಯ ಘಟನೆಯನ್ನು ಅವರು ಮಾಡಿದ್ದಾರೆ.
ಸರ್ವೆ ನಂಬ್ರ ೨೪೧/೨ಃ೨ಅ ಮತ್ತು ೨೪೧/೫ ರಲ್ಲಿ ದಾನಪತ್ರದ ಮೂಲಕ ಪಟ್ಟಣ ಪಂಚಾಯತಿಗೆ ರಸ್ತೆಗಾಗಿ ಹಸ್ತಾಂತರಿಸಿರುವ ರಸ್ತೆ ಇದಾಗಿದ್ದು ಇಲ್ಲಿ ಗೇಟನ್ನು ಅಳವಡಿಸಿ ಅಡಚಣೆ ಉಂಟು ಮಾಡಿದ್ದಾರೆ. ಆದ್ದರಿಂದ ಕೂಡಲೇ ಗೇಟು ತೆರವು ಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಂಡ ಬೇಕೆಂದು ಅಗ್ರಹಿಸಿದರು.
ದೈವಸ್ಥಾನದ ಬ್ರಹ್ಮ ಕಲಶ ನಡೆಯುವ ಸಮಯದವರೆಗಾದರೂ ಈ ರಸ್ತೆಯನ್ನು ತೆರವುಗೊಳಿಸಿ ಅನುವು ಮಾಡಿಕೊಡಬೇಕು. ಅದಾದ ಬಳಿಕ ಪರ್ಯಾಯ ರಸ್ತೆಯ ನಿರ್ಮಾಣದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಅವರು ಹೇಳಿದರು. ಮಾತುಕತೆ ಮೂಲಕ ಬಗೆಹರಿಯಲ್ಪಡುವ ವಿಷಯ ಇದಾಗಿದ್ದು ಸುಮ್ಮನೆ ಸಾರ್ವಜನಿಕರಿಗೆ ತೊಂದರೆ ನೀಡ ಬಾರದು ಎಂದು ಅವರು ಹೇಳಿದರು.
ಪ್ರತಿಭಟನಾ ಸಂಧರ್ಭದಲ್ಲಿ ಮುಖ್ಯ ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದ ಕಾರಣ ನ.ಪಂ ಸಿಬ್ಬಂದಿಗಳಾದ ಶ್ರೀಮತಿ ಶಶಿಕಲಾ ಹಾಗೂ ತಿಮ್ಮಪ್ಪ ರವರೊಂದಿಗೆ ಸೇಸಪ್ಪರವರು ಮಾತನಾಡಿದ್ದು, ಈ ವೇಳೆ ಶಶಿಕಲಾರವರು ಮಾತನಾಡಿ ನಾವು ಗೇಟು ನಿರ್ಮಿಸಿರುವ ಮನೆಯವರಿಗೆ ಪಂಚಾಯತ್ ವತಿಯಿಂದ ಫೆ ೨೪ ರ ಒಳಗೆ ಗೇಟು ತೆರವುಗೊಳಿಸಲು ನೋಟೀಸ್ ನೀಡುತ್ತೇವೆ. ಬಳಿಕ ಮುಂದಿನ ಕ್ರಮದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು ಎಂದು ಭರವಸೆ ನೀಡಿದ್ದಾರೆ. ಗೇಟು ನಿರ್ಮಿಸಿದ ವ್ಯಕ್ತಿಗಳಿಗೆ ಪಂಚಾಯತ್ ನಿಂದ ಬರೆದ ಪತ್ರವನ್ನು ತೋರಿಸಿದಾಗ ಇದಕ್ಕೆ ಒಪ್ಪಿಗೆ ಸೂಚಿಸಿ ಪ್ರತಿಭಟನಾ ಕಾರರರು ಅಲ್ಲಿಯವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಾಗಿ ಮತ್ತು ಅವರಿಗೆ ನೀಡಿದ ಸಮಯದಲ್ಲಿ ಗೇಟು ತೆರವುಗೊಳಿಸದೇ ಇದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದರು.
ಈ ಸಂದರ್ಭದಲ್ಲಿ ಸಮಿತಿಯ ಸುಳ್ಯ ಅಧ್ಯಕ್ಷ ವಿಶ್ವನಾಥ್ ಕಲ್ಮಡ್ಕ, ಸಂಘಟನಾ ಕಾರ್ಯದರ್ಶಿ ದಿನೇಶ್ ಕೊಡಂಚಿಕಾರ್, ದಲಿತ ಸಮಿತಿ ಮುಖಂಡ ಪರಮೇಶ್ವರ್ ಕೆಮ್ಮಿಂಜೆ, ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಯಾಮಿನಿ ಬೆಟ್ಟಂಪ್ಪಾಡಿ, ಬಂಟ್ವಾಳ ತಾಲೂಕು ಅಧ್ಯಕ್ಷೆ ವಿಮಲಾ ಮುಳಿಯ, ಸ್ಥಳೀಯ ನಿವಾಸಿಗಳು ಹಾಗೂ ಸಮಿತಿ ಸದಸ್ಯರುಗಳಾದ ಶೋಭಾ, ಆನಂದ, ರಮೇಶ್, ಪದ್ಮಾವತಿ, ಹರೀಶ್, ದಿನೇಶ್, ರಕ್ಷಿತ್, ತನಿಯಪ್ಪ, ಪುಟ್ಟು ಅಡೂರು,ಮೀನಾಕ್ಷಿ, ಕಮಲಾ ಬೆಳ್ಳಾರೆ, ಕುಸುಮ, ಬಾಬು, ಭರತ್ ಮೊದಲಾದವರು ಉಪಸ್ಥಿತರಿದ್ದರು.