ಸುಳ್ಯ ನಗರದಲ್ಲಿ ಫುಟ್ ಪಾತ್ ಮೇಲೆ ಸಾರ್ವಜನಿಕರು ವಾಹನ ನಿಲ್ಲಿಸಲು ಆರಂಭಿಸಿದ್ದು, ಫುಟ್ ಪಾತ್ ಮೇಲೆ ನಡೆದಾಡುವವರಿಗೆ ಇದರಿಂದ ತೊಂದರೆ ಎದುರಾಗಿದೆ.
ಸುಳ್ಯ ನಗರದಲ್ಲಿ ಎರಡು ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವ ಹಾಗಿಲ್ಲ. ಒಂದು ದಿನ ಒಂದು ಬದಿಯಲ್ಲಿ ಪಾರ್ಕಿಂಗ್ ಮಾಡಿದರೆ ಮರುದಿನ ಇನ್ನೊಂದು ಬದಿಯಲ್ಲಿ ಪಾರ್ಕಿಂಗ್ ಮಾಡುವ ಪದ್ಧತಿ ಸುಳ್ಯ ನಗರದಲ್ಲಿದೆ.
ಅದನ್ನೇಲ್ಲ ಮೀರಿ ಫುಟ್ ಪಾತ್ ನಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ.
ಸಾರ್ವಜನಿಕ ನಡೆದಾಡುವ ಫುಟ್ ಪಾತ್ ಸ್ಲಾಬ್ ಅಲ್ಲಲ್ಲಿ ತುಂಡಾಗಿ ನಡೆದಾಡುವುದೇ ತುಂಬಾ ಕಷ್ಟಪಟ್ಟು ಅದರೆಡೆಯಲ್ಲಿ ಫುಟ್ ಪಾತ್ ನಲ್ಲಿ ವಾಹನ ಪಾರ್ಕಿಂಗ್ ಮಾಡಿದರೇ ಸಾರ್ವಜನಿಕರೂ ಎಲ್ಲಿ ನಡೆದಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿಕೊಟ್ಟರೆ ಉತ್ತಮ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.