ಜಾರ್ಖಂಡ್ ರಾಜ್ಯದ ರಾಂಚಿಯ ಖೇಲ್‌ಗಾಂವ್‌ನಲ್ಲಿ ಫೆ.10 ರಂದು ನಡೆದ 68 ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದ ಕಂಪ್ಯೂಟರ್ ಎವಾರ್‌ನೆಸ್ ಸ್ಪರ್ಧೆಯಲ್ಲಿ ಗುರುರಾಜ್ ಜಾಧವ್‌ರವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ.
ಸುಳ್ಯ ನೆಹರೂ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಗುರುರಾಜ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಸಿಸ್ಟಂ ಅಡ್ಮಿಿನಿಸ್ಟ್ರೇಟರ್ ಆಗಿ ಹಾಗೂ ಮುಲ್ಕಿಿ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸಿದ್ದು,
ಪ್ರಸ್ತುತ ಸಿಐಡಿ ಕಛೇರಿ ಬೆಂಗಳೂರು ಇಲ್ಲಿ ಅಡ್ಮಿಿನಿಸ್ಟ್ರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿಿದ್ದಾರೆ.
ಈ ಹಿಂದೆ ರಾಜ್ಯ ಮಟ್ಟದಲ್ಲಿ 4 ಚಿನ್ನದ ಪದಕ ಮತ್ತು ಅಖಿಲ ಭಾರತ ಕರ್ತವ್ಯ ಕೂಟ ಗುಜರಾತ್(2010)ನಲ್ಲಿ ಕಂಚಿನ ಪದಕ ಹಾಗೂ ಮತ್ತು ಹರ್ಯಾಣದಲ್ಲಿ (2016) ಬೆಳ್ಳಿಯ ಪದಕಗಳೊಂದಿಗೆ ಇದು ಇವರ 3ನೇ ರಾಷ್ಟ್ರ ಮಟ್ಟದ ಪದಕವಾಗಿದೆ. ಇವರು
ಮೂಲತಃ ಕಾಸರಗೋಡಿನವರು.