ಫೆ.26ರಂದು ಮಹಾಶಿವರಾತ್ರಿ ಪೂಜೆ
ಉಬರಡ್ಕ ಮಿತ್ರರೂ ಗ್ರಾಮದ ಬಳ್ಳಡ್ಕ ಶಿವಮಠದಲ್ಲಿ ಶ್ರೀ ದೇವರ ಪೂಜೆಯು ಫೆ.17ರಂದು ಮಧ್ಯಾಹ್ನ ಜರುಗಿತು.
ಫೆ.16ರಂದು ರಾತ್ರಿ ಉಗ್ರಾಣ ತುಂಬಿಸಲಾಯಿತು. ಫೆ.17ರಂದು ಬೆಳಿಗ್ಗೆ ಗಣಪತಿ ಹವನ, ನಾಗನಪೂಜೆ , ಮಧ್ಯಾಹ್ನ ಶ್ರೀ ದೇವರ ಪೂಜೆ, ಹಣ್ಣುಕಾಯಿ ಕಾಣಿಕೆ, ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಬಳ್ಳಡ್ಕ ಕುಟುಂಬದ ಯಜಮಾನ ಬಳ್ಳಡ್ಕ ನಾರಾಯಣ ಗೌಡ ಹಾಗೂ ಒಂಭತ್ತು ಮನೆ ಸಹ ಕುಟುಂಬಸ್ಥರು, ಬಳ್ಳಡ್ಕ, ಕೆದಂಬಾಡಿ, ಸುಳ್ಯಕೋಡಿ, ಕುದ್ಪಾಜೆ, ಕಾನತ್ತಿಲ, ಕೂಟೇಲು, ಕುಡೆಕಲ್ಲು, ಕೊಯಿಂಗಾಜೆ ಪರಿವಾರದವರು ಉಪಸ್ಥಿತರಿದ್ದರು.
ಫೆ.26ರಂದು ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ಮಹಾಶಿವರಾತ್ರಿ ಪೂಜೆ , ಭಜನಾ ಕಾರ್ಯಕ್ರಮ ನಡೆಯಲಿದೆ.