ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 8 ಮಂದಿ ಸದಸ್ಯರನ್ನು ಸರಕಾರ ನೇಮಿಸಿ ಆದೇಶಿಸಿದೆ.
ಸಾಮಾನ್ಯ ವರ್ಗದ ಐದು ಸದಸ್ಯರ ಪೈಕಿ ನಾಲ್ವರ ಹೆಸರು ಮಾತ್ರ ಪ್ರಕಟವಾಗಿದ್ದು, ಮರ್ಕಂಜ ಗ್ರಾಮದ ಕಾಯರ ಮನೆ ರುಕ್ಮಯ್ಯ ಗೌಡರ ಪುತ್ರ ಜಗನ್ನಾಥ್, ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ದಿ. ಮಹಾಲಿಂಗ ಮಣಿಯಾಣಿಯವರ ಪುತ್ರ ಲಕ್ಷ್ಮಣ ಬೊಳ್ಳಾಜೆ, ಮರ್ಕಂಜ ಗ್ರಾಮದ ಗೊಳಿಯಡ್ಕ ಗೋಪಾಲಕೃಷ್ಣರವರ ಪುತ್ರ ಜಗದೀಶ್ ಬಳ್ಕಾಡಿ., ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ ಲಿಂಗಪ್ಪ ಗೌಡರ ಪುತ್ರ ಮೋಹಿತ್ ಹರ್ಲಡ್ಕ ನೇಮಕಗೊಂಡಿದ್ದಾರೆ.
೨ ಮಹಿಳಾ ಸ್ಥಾನಕ್ಕೆ
ಮರ್ಕಂಜ ಗ್ರಾಮದ ನಾರ್ಕೋಡು ಹರೀಶ್ ನಾರ್ಕೋಡುರವರ ಪತ್ನಿ ಶ್ರೀಮತಿ ಶಾಂತಲಾ, ಮರ್ಕಂಜದ ಕಲ್ಕಾಡು ಗುರುರಾಜ್ ರಾವ್ ರವರ ಪತ್ನಿ ಶ್ರೀಮತಿ ರಮ್ಯಾ ಗುರುರಾಜ್ ಮತ್ತು ಪ. ಜಾತಿ / ಪ. ಪಂಗಡ ೧ ಸ್ಥಾನಕ್ಕೆ ಮರ್ಕಂಜ ಗ್ರಾಮದ ಕಟ್ಟಕೋಡಿ ಬೈರ ರವರ ಪುತ್ರ ಅಣ್ಣು ಮುಗೇರ ನೇಮಕಗೊಂಡಿದ್ದಾರೆ.
ಅರ್ಚಕರ ಸ್ಥಾನದಲ್ಲಿ ಕಾವೂರು ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರು ಸದಸ್ಯರಾಗಲಿದ್ದಾರೆ.
ಸಾಮಾನ್ಯ ಒಂದು ಸ್ಥಾನ ತೆರವಾಗಿದ್ದು, ಆ ಸ್ಥಾನಕ್ಕೆ ಯಾರ ಹೆಸರು ಬರುತ್ತದೆ ಎಂದು ಕಾದು ನೋಡಬೇಕಾಗಿದೆ.
ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನವು ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಉಭಯ ಗ್ರಾಮಗಳಿಗೊಳಪಟ್ಟಿದ್ದು, ಇದರ ವ್ಯವಸ್ಥಾಪನಾ ಸಮಿತಿಯು ಕಾವೂರು ಸೇರಿದಂತೆ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ, ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತೋಟಚಾವಡಿ ಶ್ರೀ ನಾಯರ್ ಯಾನೆ ಉಲ್ಲಾಕುಳು ದೈವಸ್ಥಾನ, ಮುಂಡೋಡಿ ಶ್ರೀ ರಾಜನ್ ದೈವಸ್ಥಾನ ಹೀಗೆ ಪಂಚಸ್ಥಾಪನೆಗಳಿಗೆ ಒಳಪಡುತ್ತದೆ. ಆದರೆ ಈಗ ಬಂದಿರುವ ಆದೇಶದಲ್ಲಿ ಪಂಚಸ್ಥಾಪನೆಗಳ ಬಗ್ಗೆ ಯಾವುದೇ ಉಲ್ಲೇಖ ಇರುವುದಿಲ್ಲ. ಈ ಬಗ್ಗೆ ಧಾರ್ಮಿಕ ಪರಿಷತ್ ಸದಸ್ಯ ಲಕ್ಷೀಶ ಗಬಲಡ್ಕ ರವರನ್ನು ಸಂಪರ್ಕಿಸಿ ವಿಚಾರಿಸಿದಾಗ ಈಗ ಬಂದಿರುವ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕದ ಆದೇಶ ಪಂಚಸ್ಥಾಪನೆಗಳಿಗೂ ಒಳಪಡುತ್ತದೆ. ಒಬ್ಬರು ಸದಸ್ಯರ ನೇಮಕ ಮಾತ್ರ ಶೀಘ್ರದಲ್ಲಿ ಆಗುತ್ತದೆ ಎಂದು ತಿಳಿಸಿದ್ದಾರೆ.