ಜೇಸಿಐ ಬೆಳ್ಳಾರೆ ವತಿಯಿಂದ ಜಾತ್ರೋತ್ಸವಗಳಲ್ಲಿ ಆನ್ನ ಮತ್ತು ನೀರಿನ ಮಹತ್ವ ತಿಳಿಸುವ ಜಾಗೃತಿ ಫಲಕ ಅನಾವರಣ ಕಾರ್ಯಕ್ರಮ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಜಾಗೃತಿ ಫಲಕ ಅನಾವರಣಗೊಳಿಸಿದರು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು, ಪೂರ್ವಧ್ಯಕ್ಷರುಗಳಾದ ಕೇಶವಮೂರ್ತಿ ಕಾವಿನಮೂಲೆ, ಪದ್ಮನಾಭ ಕಲಾಸುಮ, ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಪೂರ್ವಧ್ಯಕ್ಷರುಗಳಾದ ರವೀಂದ್ರ ಗೌಡ, ನವೀನ್ ರೈ ತಂಬಿನಮಕ್ಕಿ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ, ಬೆಳ್ಳಾರೆ ಜೇಸಿಐನ ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು. ಪೂರ್ವಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರ್ವಹಿಸಿದರು. ವರದಿ : ಉಮೇಶ್ ಮಣಿಕ್ಕಾರ