ಎಂಟು ಮಂದಿ ನಾಮಪತ್ರ ಹಿಂತೆಗೆತ
ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ಜನರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಫೆ.23 ರಂದು ಮತದಾನ ನಡೆಯಲಿದ್ದು ಅಂದೇ ಮತ ಎಣಿಕೆ ಆಗಿ ಫಲಿತಾಂಶ ಹೊರಬೀಳಲಿದೆ.
ಫೆ.,17 ರಂದು 8 ಮಂದಿ ನಾಮಪತ್ರ ಹಿಂತೆಗೆತ ಮಾಡಿದ್ದು 27 ಮಂದಿ ಕಣದಲ್ಲಿರುವುದಾಗಿ ತಿಳಿದು ಬಂದಿದೆ. ಇಂದು ಲತಾಕುಮಾರಿ ಆಜಡ್ಕ, ಸುಧೀರ್ ಎ, ಅಭಿಜಿತ್ ಕೆಂಬಾರೆ, ಕೇಶವ ಗೌಡ ಹೊಸೋಳಿಕೆ, ನಾಗೇಶ್ ಪಾರೆಪ್ಪಾಡಿ, ಕೇಶವ ಗೌಡ ಚಿಲ್ತಡ್ಕ, ಹರಿಶ್ಚಂದ್ರ ಕೇಪ್ಲಕಜೆ, ಮಹೇಶ್ ಮುತ್ಲಾಜೆ ನಾಮಪತ್ರ ಹಿಂತೆಗೆದುಕೊಂಡವರು.