ಸುಳ್ಯ ಟಿ ಎ ಪಿ ಸಿ ಎಂ ಎಸ್ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಸುಳ್ಯ ಬೀರಮಂಗಲ ನಿವಾಸಿ ಲೋಕಯ್ಯ ಗೌಡ ಕಟ್ಟ ಏನೇಕಲ್ಲು ರವರು ಇಂದು ಮಧ್ಯಾಹ್ನ 3 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಜಲಜಾಕ್ಷಿ, ಪುತ್ರಿಯರಾದ ಶ್ರೀಮತಿ ಯಶಸ್ವಿನಿ ಯಶವಂತ ಆಣರು ಬೆಳ್ತಂಗಡಿ, ತೇಜಸ್ವಿನಿ, ತಪಸ್ವಿನಿ, ಸಹೋದರರಾದ ಜಯರಾಮ ಗೌಡ ಬೀರಮಂಗಲ, ಅಣ್ಣೋಜಿ ಗೌಡ ಏನೇಕಲ್ಲು, ಹರೀಶ್ಚಂದ್ರ ಗೌಡ ಏನೇಕಲ್ಲು, ಹೊನ್ನಪ್ಪ ಗೌಡ ಏನೇಕಲ್ಲು, ಸಹೋದರಿ ಶ್ರೀಮತಿ ಭವಾನಿ ಮೊಟ್ಟೆತಡ್ಕ ಕಾವು ರವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಏನೇಕಲ್ಲು ಕಟ್ಟ ಮನೆಯಲ್ಲಿ ನಡೆಯಲಿದೆ.