ಮಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯದ ಹನೀಪ್ ಪಾಂಡ್ಲ ಮೃತ್ಯು

0

ಜ.30 ರಂದು ಹಂಪನಕಟ್ಟೆ ಜಂಕ್ಷನ್ ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯದ ಹನೀಫ್ ಪಾಂಡ್ಲ ಎಂಬವರು ಫೆ.16 ರಂದು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಫ಼ಲಕಾರಿಯಾಗದೇ ಮೃತಪಟ್ಟಿದ್ದಾರೆ‌.
ಮೃತಪಟ್ಟ ಅಪರಿಚಿತ ವ್ಯಕ್ತಿಯ ಗುರುತು ಸಿಗದೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಿಂದ ಮೃತ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗಾಗಿ ಪೋಲಿಸ್ ಇಲಾಖೆ ಸಂದೇಶವನ್ನು ರವಾನೆ ಮಾಡಿದ್ದರು.
ಇದನ್ನು ಗಮನಿಸಿದ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಮಂಗಳೂರು ಪೋಲಿಸರನ್ನು ಸಂಪರ್ಕಿಸಿದ್ದರು.


ಮೃತಪಟ್ಟ ಹನೀಫ್ ಪಾಂಡ್ಲ ಎಂಬುವರು ಸುಳ್ಯವರು ಸುಳ್ಯ ಗಾಂಧಿನಗರ ಮಸೀದಿ ಹಿಂಬದಿಯಲ್ಲಿ ನೆಲೆಸಿದ್ದರು. ಕೆಲ ವರ್ಷಗಳ ಹಿಂದೆ ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಮಂಗಳೂರು ಆಶ್ರಮವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಚಿಕಿತ್ಸೆ ಪಲಕಾರಿಯಾಗಿ ಕಾಸರಗೋಡಿನಲ್ಲಿ ತಮ್ಮ ಕುಟುಂಬದವರ ಮನೆಯಲ್ಲಿ ನೆಲೆಸಿದರೆಂದು ಬಂದಿದೆ. ಮೃತರು ಪತ್ನಿ ,ಮಕ್ಕಳು ಹಾಗು ಬಂಧುಗಳನ್ನು ಅಗಲಿದ್ದಾರೆ