ಪಯಸ್ವಿನಿ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ
ಆಲೆಟ್ಟಿ ಶ್ರೀ ಸದಾಶಿವ ದೇವರ ಕಾಲಾವಧಿ ಜಾತ್ರೋತ್ಸವವು ಫೆ .13 ರಿಂದ ಆರಂಭಗೊಂಡು ಫೆ.17 ರಂದು ಸಂಪನ್ನಗೊಂಡಿತು. ಕುಂಟಾರು ಕ್ಷೇತ್ರದ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕಕಾರ್ಯಕ್ರಮದೊಂದಿಗೆ ನಡೆಯಿತು.

ಫೆ.17 ರಂದು ಪ್ರಾತ:ಕಾಲದಲ್ಲಿ ಕವಾಟೋದ್ಘಾಟನೆಯಾಗಿ ಶ್ರೀ ದೇವರಿಗೆ ವಿಶೇಷವಾದ ಅಭಿಷೇಕವು ನಡೆಯಿತು. ಬಳಿಕ ನಿತ್ಯ ಪೂಜೆಯಾಗಿ ಶ್ರೀ ದೇವರ ಅವಭೃತ ಸ್ನಾನವು ಕೆಳಗಿನ ಆಲೆಟ್ಟಿಯ ಪಯಸ್ವಿನಿ ನದಿಯಲ್ಲಿ ನಡೆಯಿತು. ನಂತರ ಶ್ರೀ ದೇವರ ಸವಾರಿಯು ದೇವಳಕ್ಕೆ ಹಿಂತಿರುಗಿ ಸಣ್ಣ ದರ್ಶನ ಬಲಿ ಉತ್ಸವ ನಡೆದು ಬಟ್ಟಲು ಕಾಣಿಕೆಯಾಗಿ ರಾಜಾಂಗಣ ಪ್ರಸಾದ ವಿತರಣೆಯಾಗಿ ಧ್ವಜಾವರೋಹಣದೊಂದಿಗೆ 5 ದಿನಗಳ ಕಾಲ ನಡೆದ ಕಾಲಾವಧಿ ಜಾತ್ರೋತ್ಸವ ತಂತ್ರಿವರ್ಯರಿಂದ ಮಂತ್ರಾಕ್ಷತೆ ನೀಡುವ ಮೂಲಕ ಸಂಪನ್ನ ಗೊಂಡಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಪ್ರಸಾದ ವಿತರಣೆಯಾಯಿತು.