ಜಾಲ್ಸೂರು: ಸುಂಕಡ್ಕ – ಕೆಮನಬಳ್ಳಿ ಪರಿಸರದಲ್ಲಿ ಒಂಟಿಸಲಗದ ಹಾವಳಿ – ಕೃಷಿ ಬೆಳೆ ನಾಶ

0

ಜಾಲ್ಸೂರು ಗ್ರಾಮದ ಸುಂಕಡ್ಕ, ಕೆಮನಬಳ್ಳಿ ಪರಿಸರದಲ್ಲಿ ಒಂಟಿಸಲಗದ ಹಾವಳಿಗೆ ಕೃಷಿಕರ ಕೃಷಿ ಬೆಳೆ ನಾಶಗೊಂಡಿದೆ.

ಸುಂಕಡ್ಕದ ಅನಂತ ಪದ್ಮನಾಭ ಭಟ್ ಅವರ ತೋಟಕ್ಕೆ ದಾಳಿ ನಡೆಸಿದ ಕಾಡಾನೆ ಮೂರು ತೆಂಗಿನ ಗಿಡ, ಒಂದು ತೆಂಗಿನ ಮರ, ಹದಿನೈದಕ್ಕೂ ಅಧಿಕ ಬಾಳೆ ಕೃಷಿಯನ್ನು ನಾಶಪಡಿಸಿದೆ.
ಕೆಮನಬಳ್ಳಿಯ ಮುರಳೀಧರನ್ ಅವರ ಕೃಷಿ ತೋಟದಲ್ಲಿ ವ ಐದು ಅಡಿಕೆ ಮರ, ಒಂದು ತೆಂಗಿನಮರಕ್ಕೆ ಹಾನಿ ನಡೆಸಿರುವುದಾಗಿ ತಿಳಿದುಬಂದಿದೆ.