
ವಸಂತ ಶೆಟ್ಟಿ ಬೆಳ್ಳಾರೆ ಅವರ ಸಾರಥ್ಯದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇಲ್ಲಿ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರ ಮೇಳದಿಂದ “ತುಳಸಿ ಜಲಂಧರ” ಎಂಬ ಯಕ್ಷಗಾನ ಫೆ.16 ರಂದು ಪ್ರದರ್ಶನವಾಯಿತು.

ಸಂಜೆ ಆರಂಭವಾದ ಯಕ್ಷಗಾನದಲ್ಲಿ ನೂರಾರು ಸಂಖ್ಯೆಯ ಕಲಾಸಕ್ತರು ಯಕ್ಷಗಾನ ವೀಕ್ಷಿಸಿದರು. ಕಲಾಸಕ್ತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
