ಬೆಳ್ಳಾರೆ ಕ್ಯಾoಪ್ಕೋ ಸಂಸ್ಥೆಯ ವತಿಯಿಂದ ಸಾಂತ್ವನ ಯೋಜನೆಯಡಿ ಧನಸಹಾಯ ವಿತರಣೆ ಫೆ. 18ರಂದು ನಡೆಯಿತು.
ಕ್ಯಾಂಪ್ಕೋ ಬೆಳ್ಳಾರೆ ಶಾಖೆಯ ಸಕ್ರೀಯ ಸದಸ್ಯರಾದ ವೆಂಕಟರಮಣ ಭಟ್ ಕೆದಿಲರವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ)ವನ್ನು ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ ಕುಮಾರ್ ಶೆಟ್ಟಿ ಹಾಗೂ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕರಾದ ಅಶ್ವತ್ಥ ಕುಮಾರ್ ಉಪಸ್ಥಿತರಿದ್ದರು.

