ಬೆಳ್ಳಾರೆ: ಸ್ನೇಹಶ್ರೀ ಮಹಿಳಾ ಮಂಡಲದ ಆಶ್ರಯದಲ್ಲಿ ಆರೋಗ್ಯ ಮಾಹಿತಿ – ಮಕ್ಕಳ ಆರೈಕೆಯಲ್ಲಿ ಮಹಿಳೆಯರು

0

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಮಕ್ಕಳ ಆರೈಕೆಯಲ್ಲಿ ಮಹಿಳೆಯರು ಎಂಬ ವಿಷಯದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ಫೆ. 18 ರಂದು ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ (ತಡಗಜೆ ) ಅಂಗನವಾಡಿ ಕೇಂದ್ರದಲ್ಲಿ ಜರುಗಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಶ್ರೀ ಉದ್ಘಾಟಿಸಿದರು.

ಸುಳ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್ ರೈ, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ್ಯೊಪಾಧ್ಯಾಯರಾದ ಮಾಯಿಲಪ್ಪ ಜಿ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು. ಬೆಳ್ಳಾರೆ ಕ್ಲಸ್ಟರ್ ಸಮುದಾಯ ಆರೋಗ್ಯಾಧಿಕಾರಿ ಕು. ಹವ್ಯಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಭಾರತಿ ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನೇಹಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಸ್ನೇಹಶ್ರೀ ಮಹಿಳಾ ಮಂಡಲ ಕೋಶಾಧಿಕಾರಿ ಶ್ರೀಮತಿ ಕುಸುಮಾ ಕುರುoಬುಡೇಲು ಸ್ವಾಗತಿಸಿ, ಮಾಸ್ತಿಕಟ್ಟೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಇಂದಿರಾ ವಂದಿಸಿದರು. ನಿಶ್ಮಿತಾ ಬೀಡು ಕಾರ್ಯಕ್ರಮ ನಿರೂಪಿಸಿದರು.